ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಸ್ಸಿ, ಟೆವೆಜ್ ಗೆ ರಕ್ಷಣೆ ಬೇಕಿದೆ: ಮರಡೋನಾ

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್, ಜೂ.17: ಬಹುಶಃ ಪಾದರಸದಂತೆ ಅತ್ತಿಂದ ಇತ್ತ ಓಡಾಡುತ್ತಾ, ಇನ್ನೂ ತಾನು ಹಾಲಿ ಆಟಗಾರನೆಂಬ ಭ್ರಮೆಯಲ್ಲಿರುವ ಕೋಚ್ ಅನ್ನು ಫೀಫಾ ನೋಡಿರಲಿಲ್ಲ. ಡಿಯಾಗೋ ಮರಡೋನಾ ಆ ಕೊರತೆಯನ್ನು ನೀಗಿಸಿದ್ದಾರೆ. ಪೀಲೆ ಜೊತೆಗಿನ ವಾಕ್ಸಮರ ಬಿಟ್ಟು ಆದಷ್ಟು ಮೈದಾನತ್ತ ತಮ್ಮ ಚಿತ್ತ ಹರಿಸಿರುವ ಮರಡೋನಾ ಈಗ ಮತ್ತೊಂದು ವರಸೆ ತೆಗೆದಿದ್ದಾರೆ. ನಮ್ಮ ಪ್ರಮುಖ ಆಟಗಾರಿಗೆ ಸೂಕ್ತ ರಕ್ಷಣೆ ನೀಡಿ ಎಂದು ರೆಫ್ರಿಗಳಿಗೆ ಮರಡೋನಾ ಸೂಚಿಸಿದ್ದಾರೆ.

ತಂಡದ ಉತ್ತಮ ಆಟಗಾರರನ್ನು ತಡೆಗಟ್ಟುವುದು ಫುಟ್ಬಾಲ್ ಆಟದ ತಂತ್ರಗಳಲ್ಲಿ ಒಂದು. ಆ ಕಷ್ಟವನ್ನು ನಾನೂ ಕೂಡಾ ಅನುಭವಿಸಿದ್ದೇನೆ. ಈಗ ರೆಫ್ರಿಗಳು ತುಂಬಾ ಹುಷಾರಾಗಿದ್ದಾರೆ. ಸುಮ್ಮನೆ ಹಾರಿ ಬೀಳುವ ಆಟಗಾರರಿಗೆ ಫ್ರೀ ಕಿಕ್ ನೀಡುವ ಕಾಲ ಹೋಯ್ತು. ಮೆಸ್ಸಿ ಅಥವಾ ಕಾರ್ಲೊಸ್ ಟೆವೆಜ್ ಓಟಕ್ಕೆ ಕೊರಿಯಾ ಆಟಗಾರರು ಅಡ್ಡಿ ಪಡಿಸಿದರೆ ತಕ್ಷಣವೇ ಹಳದಿ ಕಾರ್ಡು ತೋರಿಸಿ, ಮತ್ತೆ ಫೌಲ್ ಮಾಡಿದರೆ ಹೊರಗಟ್ಟಿ ಎಂದು ಮರಡೋನಾ ಗುಡುಗಿದ್ದಾರೆ.

ಮೆಸ್ಸಿ ಹಾಗೂ ಟೆವೆಜ್ ತಂಡದ ಅತ್ಯುತ್ತಮ ಆಟಗಾರರು ಅರ್ಜೆಂಟೀನಾ ಮುಂದಿನ ಸುತ್ತುಗಳಲ್ಲಿ ಯಶ ಕಾಣಬೇಕಾದರೆ, ಈ ಇಬ್ಬರು ಆಟಗಾರರ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳುವುದು ಅವಶ್ಯ. ಆದರೆ, ನಿರೀಕ್ಷೆಯಂತೆ ಎದುರಾಳಿ ತಂಡದ ಆಟಗಾರರು ಸಂಚು ಮಾಡಿ, ತಡೆಯೊಡ್ಡುತ್ತಾರೆ. ರೆಫ್ರಿ ಸರಿಯಾದ ನಿರ್ಣಯ ನೀಡಲಿ ಎಂದು ಬಯಸುತ್ತೇನೆ ಎಂದು ಮರಡೋನಾ ಹಲುಬಿದ್ದಾರೆ.

ಆದರೆ, ಸತ್ಯದ ಸಂಗತಿ ಎಂದರೆ, ರೆಫ್ರಿಗಳಿಗೆ ಪಂದ್ಯದಲ್ಲಿ ಆಡುವ ಆಟಗಾರರಲ್ಲಿ ಜಗದ್ವಿಖ್ಯಾತರೇ ಇದ್ದರೂ ಎಲ್ಲರನ್ನು ಒಂದೇ ಬಗೆಯಿಂದ ಕಾಣುತ್ತಾರೆ. ಅದರಲ್ಲೂ ವಿಶ್ವಕಪ್ ನಲ್ಲಿ ಜಿನದಿನ್ ಜಿದಾನೆ, ಡೇವಿಡ್ ಬೆಕ್ ಹ್ಯಾಮ್, ರಾಬರ್ಟೋ ಕರ್ಲೊಸ್ ರಂತಹ ಮಹಾನ್ ಆಟಗಾರರಿಗೆ ಮುಲಾಜಿಲ್ಲದೆ ಕೆಂಪು ಕಾರ್ಡ್ ತೋರಿಸಿ ಹೊರಗಟ್ಟಿದ್ದಾರೆ. ಮರಡೋನಾ ತನ್ನ ತಂಡದ ಆಟಗಾರರನ್ನು ರಕ್ಷಿಸಿ ಎನ್ನುವುದು ಮೂರ್ಖತನ ಎಂಬುದು ಫುಟ್ಬಾಲ್ ಪಂಡಿತರ ಅಭಿಪ್ರಾಯ.

English summary
Maradona is calling on World Cup referees to not be so afraid of blowing the whistle on players. He is basically asking for more protection for flair players at the World Cup, including Lionel Messi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X