ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ ಪ್ರಕರಣದಲ್ಲಿ ನಮ್ಮ ಕೈವಾಡವಿಲ್ಲ: ಬಿಷಪ್

By Mahesh
|
Google Oneindia Kannada News

Archbishop Bernard Moras of Bangalore.
ಬೆಂಗಳೂರು, ಜೂ.16: ಸ್ವಾಮಿ ನಿತ್ಯಾನಂದನ ಲೈಂಗಿಕ ಹಗರಣ ಬಯಲು ಮಾಡುವಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ಇದೇ ಎಂಬ ಪ್ರಮೋದ್ ಮುತಾಲಿಕ್ ಅವರ ಆರೋಪವನ್ನು ರಾಜ್ಯ ದ ಕ್ಯಾಥೋಲಿಕ್ ಚರ್ಚ್ ಗಳ ಸಂಘಟನೆ ಅಲ್ಲಗೆಳೆದಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಚ್ ಬಿಷಪ್ ಬೆರ್ನಾಡ್ ಮೊರಸ್ , ಇದು ಸುಳ್ಳು ಆರೋಪ ಹಾಗೂ ಅತ್ಯಂತ ಹೀನಾಯವಾದ ಪ್ರಚಾರ ತಂತ್ರ ಎಂದಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವ ಮೊದಲು ಹಿಂದೂ ನಾಯಕರು ಯೋಚಿಸಬೇಕು. ಕ್ರೈಸ್ತ ಸಮುದಾಯಕ್ಕೆ ಅಪಮಾನ ಮಾಡುವಂಥ ಹೇಳಿಕೆ ಇದಾಗಿದೆ ಎಂದು ಗುಡುಗಿದರು.

ಶಾಂತಿ ಹಾಗೂ ಸಹಬಾಳ್ವೆಯನ್ನು ಕದಡಿ ಸಮಾಜದಲ್ಲಿ ಎರಡು ಕೋಮುಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುವುದು ಅಕ್ಷಮ್ಯ. ಸಮಾಜಘಾತುಕತನ ಎಂದರು. ಜೈಲಿನಿಂದ ಹೊರಬಂದ ಸ್ವಾಮಿ ನಿತ್ಯಾನಂದನನ್ನು ಬಿಡದಿ ಆಶ್ರಮದಲ್ಲಿ ಇತ್ತೀಚೆಗೆ ಭೇಟಿ ಮಾಡಿದ ನಂತರ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತಮಿಷನರಿಗಳ ವಿರುದ್ಧ ಹರಿಹಾಯ್ದಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X