ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚ್ಚಾಟಿತ ನಾಯಕ ಜಸ್ವಂತ್ ಮರಳಿ ಬಿಜೆಪಿಗೆ

By Mahesh
|
Google Oneindia Kannada News

Jaswanth Singh
ನವದೆಹಲಿ, ಜೂ.16: ಮಾಜಿ ವಿದೇಶಾಂಗ ವ್ಯವಹಾರ ಸಚಿವ , ಹಿರಿಯ ರಾಜಕೀಯ ನಾಯಕ ಜಸ್ವಂತ್ ಸಿಂಗ್ ಭಾರತೀಯ ಜನತಾ ಪಕ್ಷಕ್ಕೆ ವಾಪಾಸ್ಸಾಗುವ ಎಲ್ಲಾ ಸೂಚನೆಗಳು ಕಂಡು ಬಂದಿವೆ. ಸುಮಾರು 9 ತಿಂಗಳ ಹಿಂದೆ ಬಿಜೆಪಿ ಪಕ್ಷದಿಂದ ಜಸ್ವಂತ್ ಉಚ್ಚಾಟನೆಗೊಂಡಿದ್ದರು.

ಜಸ್ವಂತ್ Jinnah-India, Partition, Independenceಪುಸ್ತಕದಲ್ಲಿ ಪಾಕಿಸ್ತಾನದ ರಾಷ್ಟ್ರಪಿತ ಮಹಮ್ಮದ್ ಆಲಿ ಜಿನ್ನಾ ಅವರನ್ನು ಹಾಡಿ ಹೊಗಳಿದ್ದು ಅವರ ಉಚ್ಚಾಟನೆಗೆ ಕಾರಣವಾಗಿತ್ತು. ಆದರೆ, ಜಸ್ವಂತ್ ಮರು ಸೇರ್ಪಡೆ ಬಗ್ಗೆ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಜಸ್ವಂತ್ ಸಿಂಗ್ ಪಕ್ಷಕ್ಕೆ ಮರಳುವ ಬಗ್ಗೆ ಈಗಲೇ ಏನನ್ನು ಹೇಳಲಾಗದು. ಬಿಜೆಪಿಯ ಸಂಸದೀಯ ಮುಖ್ಯಸ್ಥರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು . ಪಕ್ಷದ ಅಧ್ಯಕ್ಷ ಈ ಬಗ್ಗೆ ಸದ್ಯದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ ಎಂದು ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದ್ದಾರೆ.

ಜಸ್ವಂತ್ ತಮ್ಮ ಪುಸ್ತಕದಲ್ಲಿ ಜಿನ್ನಾರನ್ನು ಜಾತ್ಯಾತೀತ ನಾಯಕ್ ಎಂದಿದ್ದರಲ್ಲದೆ, ಜವಹರ್ ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರನ್ನು ಭಾರತ ವಿಭಜನೆಗೆ ಕಾರಣೀ ಪುರುಷರು ಎಂದು ಜರೆದಿದ್ದರು. ಕಳೆದ ವರ್ಶ ಆಗಸ್ಟ್ ನಲ್ಲಿ ಶಿಮ್ಲಾದಲ್ಲಿ ನಡೆದ ಬಿಜೆಪಿ ಚಿಂತನ್ ಭೈಠಟ್ ನಲ್ಲಿ ಜಸ್ವಂತ್ ಉಚ್ಚಾಟಿಸಲು ತೀರ್ಮಾನಿಸಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X