ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಜಯ nextಗೆ ನೆಕ್ಸ್ಟ್ ಸಂಪಾದಕ ಯಾರು?
ವಿಜಯ next ಪತ್ರಿಕೆಯ ಪ್ರಥಮ ಸಂಪಾದಕ ದೀಪಕ್ ತಿಮ್ಮಯ್ಯ ರಾಜೀನಾಮೆ ಸಲ್ಲಿಸಿದ್ದು, ಅವರನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಮೇ 28ರಂದು ಓದುಗರ ಕೈಸೇರಿದ ಮರುದಿನವೇ ಸಂಪಾದಕರು ರಾಜೀನಾಮೆಯನ್ನು ಬಿಸಾಕಿದ್ದಾರೆ. ಮೊಟ್ಟಮೊದಲ ದಿನದಿಂದಲೇ ಅಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬುದಕ್ಕೆ ತಿಮ್ಮಯ್ಯ ಅವರ ರಾಜೀನಾಮೆ ಕನ್ನಡಿ ಹಿಡಿದಿದೆ.
ಉದಯ ಟಿವಿಯಲ್ಲಿ ಸಂದರ್ಶನ ಮಾಡಿಕೊಂಡಿದ್ದ ಬಹುಮುಖ ವ್ಯಕ್ತಿತ್ವದ ದೀಪಕ್ ತಿಮ್ಮಯ್ಯ ಹೊಸ ಮಾಧ್ಯಮಕ್ಕೆ ಹೊಂದಿಕೊಳ್ಳದೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಸರಿ ತಪ್ಪುಗಳ ವಿಶ್ಲೇಷಣೆಯಲ್ಲಿ ತೊಡಗಿರುವ ಆಡಳಿತ ಮಂಡಳಿ ಈ ವಿವಾದದ ಬಗ್ಗೆ ತುಟಿ ಮುಚ್ಚಿಕೊಂಡಿದೆ. 24 ಪುಟಗಳ ಬಣ್ಣಬಣ್ಣದ ಪತ್ರಿಕೆ ಮಾತ್ರ ಹೊಸ ಸಂಪಾದಕರ ಹುಡುಕಾಟದಲ್ಲಿದೆ. (ಸುದ್ದಿ ಮೂಲ : ಸ್ಯಾನ್ಸ್ ಸರೀಫ್ ಬ್ಲಾಗ್)
Comments
Story first published: Tuesday, June 15, 2010, 18:10 [IST]