ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ : ಇದುವರೆಗಿನ ಪಂದ್ಯಗಳ ಸಮೀಕ್ಷೆ

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

FIFA World Cup 2010
ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೂ 11 ಪಂದ್ಯಗಳು ನಡೆದಿದ್ದು ಆ ಪೈಕಿ ಏಳು ಪಂದ್ಯಗಳು ಅಚ್ಚರಿಯ ಫಲಿತಾಂಶ ತಂದಿತ್ತಿವೆ. 11 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಡ್ರಾ ಆಗಿವೆ. ಈ ಅಚ್ಚರಿ ಹೀಗೇ ಮುಂದುವರಿದರೆ, ತಜ್ಞರ ಲೆಕ್ಕಾಚಾರಗಳನ್ನೆಲ್ಲ ಮೀರಿ ಅನಿರೀಕ್ಷಿತ ತಂಡಗಳು ಈ ಸಲ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಕೌಟ್ ಹಂತ ಪ್ರವೇಶಿಸುತ್ತವೆ.

ಪ್ರಬಲ-ದುರ್ಬಲ ತಂಡಗಳ ನಡುವೆ ಈ ಸಲ ನಡೆಯುತ್ತಿರುವ ಸಮಬಲದ ಹೋರಾಟಕ್ಕೆ ಪ್ರಮುಖ ಕಾರಣ ದುರ್ಬಲ ತಂಡಗಳು ರೂಪಿಸಿಕೊಂಡಿರುವ ಆಕ್ರಮಣಕಾರಿ ಆಟ. ಆಕ್ರಮಣದ ಜೊತೆಗೆ ಹೊಂದಾಣಿಕೆ ಮತ್ತು ತಂತ್ರಗಾರಿಕೆಯೂ ಇದ್ದರೆ ಗೆಲುವು ಸುಲಭಸಾಧ್ಯ ಎಂಬುದಕ್ಕೆ 47ನೇ (ವಿಶ್ವ)ಶ್ರೇಯಾಂಕಿತ ದಕ್ಷಿಣ ಕೊರಿಯಾವು 13ನೇ (ವಿಶ್ವ)ಶ್ರೇಯಾಂಕದ ಗ್ರೀಸನ್ನು 2-0 ಗೋಲುಗಳಿಂದ ಸೋಲಿಸಿದ್ದೇ ಸಾಕ್ಷಿ.

ಆದರೆ, ಶಿಸ್ತುಬದ್ಧತೆ, ಕಲಾತ್ಮಕತೆ, ಲೆಕ್ಕಾಚಾರ ಹಾಗೂ ನೈಪುಣ್ಯ ಇವುಗಳ ಸಹಿತ ತಂಡವು ಹೊಂದಾಣಿಕೆಯಿಂದ ಆಟವಾಡಿದರೆ ಅಂತಹ ತಂಡಕ್ಕೆ ಭರ್ಜರಿ ಜಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಆಸ್ಟ್ರೇಲಿಯಾ ವಿರುದ್ಧ ಜರ್ಮನಿ ಗಳಿಸಿದ 4-0 ಗೋಲುಗಳ ಗೆಲುವು ಉತ್ತಮ ನಿದರ್ಶನ.

ಮುಂದಿನ ದಿನಗಳಲ್ಲಿ ಯಾವ ಗುಣಗಳು ಮೇಲುಗೈ ಪಡೆಯುತ್ತವೆಂಬುದನ್ನು ನೋಡೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X