ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷಿಸಿ: ಚಿನ್ನ 10ಗ್ರಾಂಗೆ 20 ಸಾವಿರ ಆಗಲಿದೆ!

By Mahesh
|
Google Oneindia Kannada News

Gold price may hike soon
ನವದೆಹಲಿ, ಜೂ.15: ಷೇರು ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಮಾರುಕಟ್ಟೆಗೆ ಬದಲಾಗಿ ಬೆಲೆಬಾಳುವ ಲೋಹಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ವಹಿಸುತ್ತಿದ್ದಾರೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದು ಸಾಧ್ಯವಾದರೆ, ಚಿನಿವಾರ ಪೇಟೆ ವ್ಯವಹಾರ ಹೆಚ್ಚಳವಾಗಲಿದೆ.

ಯೂರೋಪಿನ ಆರ್ಥಿಕ ಬಿಕ್ಕಟ್ಟಿನ ಅನಿಶ್ಚತತೆಯಿಂದಾಗಿ ಹೂಡಿಕೆದಾರರು ಚಿನ್ನ ಖರೀದಿಯಲ್ಲಿ ತೊಡಗಿದ್ದು ಮುಂದಿನ 15 ದಿನಗಳಲ್ಲಿ ಚಿನ್ನದ ಬೆಲೆ 10ಗ್ರಾಮ್ ಗಳಿಗೆ 18-19 ಸಾವಿರದಲ್ಲಿರಲಿದೆ ಎಂದು ಎಸ್ ಎಮ್ ಸಿ ಗ್ಲೋಬಲ್ ನ ಉಪಾದ್ಯಕ್ಷ ರಾಜೇಶ್ ಜೈನ್ ಹೇಳುತ್ತಾರೆ.

ಯೂರೋ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದರೆ ಚಿನ್ನದ ಬೆಲೆ 20 ಸಾವಿರ ರೂಪಾಯಿಗಳನ್ನೂ ತಲುಪಲಿದೆ. ಚಿನ್ನದ ಬೆಲೆ ಶೀಘ್ರದಲ್ಲಿ 19,500 ನಂತರ 20 ಸಾವಿರ ತಲುಪಲಿದೆ ಎಂದು ಮೋತಿಲಾಲ್ ಒಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ನ ಸರಕು ವಿಭಾಗದ ಮುಖ್ಯಸ್ಥ ಕುಲ್ ಜೀತ್ ಕಟಾರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಚಿನ್ನದ ಬೆಲೆ ಲಂಡನ್ ನಲ್ಲಿ ಒಂದು ಔನ್ಸ್ ಗೆ 1231.7 ಡಾಲರ್ ದಾಖಲಾಗಿತ್ತು. ಎಮ್ ಕೆ ಫೈನಾನ್ಷಿಯಲ್ ಸರ್ವೀಸಸ್ ನ ಸರಕು ವಿಭಾಗದ ಮುಖ್ಯಸ್ಥ ಅತುಲ್ ಘೋಷ್ ಅವರ ಪ್ರಕಾರ ಚಿನ್ನದ ಬೆಲೆ ಮುಂದಿನ ಎರಡು ತಿಂಗಳೊಳಗೆ 20 ಸಾವಿರ ರೂಪಾಯಿ ತಲುಪಲಿದೆ.

ಯೂರೋಪ್ ಬಿಕ್ಕಟ್ಟು ಸೃಷ್ಟಿಯಾದ ನಂತರ ವಿಶ್ವಾದ್ಯಂತ ಷೇರು ಮಾರುಕಟ್ಟೆಗಳು ಕರೆಕ್ಷನ್ ಆಗುತ್ತಿದ್ದು ಏರಿಳಿತ ಹೆಚ್ಚಾಗಿದ್ದು ಹೂಡಿಕೆದಾರರು ಹೂಡಿಕೆಯನ್ನು ವಾಪಸ್ ಪಡೆಯುತ್ತಿದ್ದಾರೆ. ದೇಶದಲ್ಲಿ ಕಳೆದ ಮೇ ತಿಂಗಳಿನಲ್ಲಿ ವಿದೇಶೀ ಸಾಂಸ್ಥಿಕ ಹೂಡಿಕೆದಾರರು 2ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X