ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದಿಂದ ವರ್ಷಕ್ಕೆ 40 ಬಿಲಿಯನ್ ಡಾಲರ್ ನಷ್ಟ

By Mahesh
|
Google Oneindia Kannada News

Corruption robs developing nations of $40 billion annually
ನವದೆಹಲಿ, ಜೂ.14: ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಬ್ರಹ್ಮಾಂಡವಾಗಿ ವ್ಯಾಪಿಸಿರುವ ಭ್ರಷ್ಟಾಚಾರದಿಂದಾಗಿ ವಾರ್ಷಿಕ 40 ಬಿಲಿಯನ್ ಡಾಲರ್ ಗಳಿಗೂ ಹೆಚ್ಚು ಹಣ ಲೂಟಿಯಾಗುತ್ತಿದೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಂಚ ಹಾಗೂ ದುರುಪಯೋಗದಿಂದಾಗಿ ಇಷ್ಟೊಂದು ಭಾರೀ ಮೊತ್ತದ ಹಣ ಕದಿಯಲಾಗುತ್ತಿದ್ದು ಇದರಲ್ಲಿ ಕೇವಲ 5 ಬಿಲಿಯನ್ ಡಾಲರ್ ಗಳಷ್ಟು ಹಣ ವಸೂಲಿ ಮಾಡಲಾಗಿದೆ ಎಂದು ವಿಶ್ವಬ್ಯಾಂಕಿನ ಕಳವಾದ ಆಸ್ತಿ ವಸೂಲಿ ಶಾಖೆ ಸಮನ್ವಯಾಧಿಕಾರಿ ಅಡ್ರಿಯನ್ ಫೊಜಾರ್ಡ್ ಹೇಳುತ್ತಾರೆ.

ಈ ಶಾಖೆ ವಿಶ್ವ ಬ್ಯಾಂಕ್ ಸಮೂಹ ಮತ್ತು ಭ್ರಷ್ಟಾಚಾರ ನಿರೋಧ ಶಾಖೆಯ ಸಹಯೋಗದ್ದಾಗಿದೆ. ಭ್ರಷ್ಟಾಚಾರವನ್ನು ಜಾಗತಿಕ ಮಟ್ಟದಲ್ಲಿ ತಡೆಯುವ ಪ್ರಯತ್ನ ನಡೆಸಿದೆ. ವಸೂಲಿ ಮಾಡಲಾದ ಪ್ರತೀ 100 ಮಿಲಿಯನ್ ಡಾಲರ್ ಹಣದಿಂದ 6ಲಕ್ಷ ಜನ ಏಡ್ಸ್ ರೋಗಿಗಳಿಗೆ ವರ್ಷವಿಡೀ ಚಿಕಿತ್ಸೆ ನೀಡಬಹುದಾಗಿದೆ ಎಂದು ವರದಿ ಹೇಳಿದೆ.

ಪ್ರಸ್ತುತ ವಿಶ್ವದ 22ರಾಷ್ಟ್ರಗಳಲ್ಲಿ ಈ ಶಾಖೆ ಕಾರ್ಯ ನಿಹಿಸುತ್ತಿದೆ. ಕಳ್ಳರ ಸ್ವರ್ಗವಾಗಿರುವ ಯಾವುದೇ ದೇಶದಲ್ಲಿ ಕೆಲಸ ಮಾಡಲು ಈ ಶಾಖೆ ಸಿದ್ದವಿದ್ದು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X