ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ತಿಂಗಳಲ್ಲಿ ಅಟ್ಟದ ಮೇಲೇರಿದ ಹಣದುಬ್ಬರ

By Prasad
|
Google Oneindia Kannada News

Inflation turns double-digit, at 10.16 pc in May
ನವದೆಹಲಿ, ಜೂ. 14 : ಕಡಿವಾಣವಿಲ್ಲದ ಆಹಾರ ಬೆಲೆ ಮತ್ತು ಬೆಲೆ ಏರಿಕೆ ಇತರ ಉತ್ಪನ್ನಗಳಿಗೂ ಹಬ್ಬುತ್ತಿರುವುದರಿಂದ ಮೇ ತಿಂಗಳಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.10.16 ತಲುಪಿದೆ.

ಇದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ತ್ರೈಮಾಸಿಕ ಆರ್ಥಿಕ ನೀತಿ ಪರಾಮರ್ಶೆಯ ನಿಗದಿತ ದಿನವಾದ ಜುಲೈ 27ಕ್ಕೂ ಮೊದಲೇ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾದ ಒತ್ತಡಕ್ಕೀಡಾಗಿದೆ. ಕಳೆದ ಏಪ್ರಿಲ್ ನಲ್ಲಿ ಶೇ.9.59ರಷ್ಟು ದಾಖಲಾಗಿದ್ದ ಹಣದುಬ್ಬರ ಹೆಚ್ಚಿದ ಆಹಾರ ಪದಾರ್ಥಗಳ ಬೆಲೆ ಹಾಗೂ ಇಂಧನ ದರದಿಂದಾಗಿ ಮತ್ತಷ್ಟು ಏರಿ ಕುಳಿತಿದೆ.

ಆಹಾರೋತ್ಪನ್ನಗಳ ಜೊತೆ ಏರಿರುವ ಸ್ಟೀಲ್ ಮತ್ತು ಪೀಠೋಪಕರಣಗಳ ಬೆಲೆ ಹಣದುಬ್ಬರಕ್ಕೆ ಮತ್ತಷ್ಟು ಇಂಬು ನೀಡಿದೆ. ಸ್ಟೈನ್ ಲೆಸ್ ಸ್ಟೀಲ್ ಉತ್ಪನ್ನಗಳ ದರಗಳು ಶೇ.26ರಷ್ಟು ಏರಿಕೆ ಕಂಡಿವೆ. ಸ್ಟೀಲ್ ಶೀಟ್, ಪ್ಲೇಟು ಮತ್ತಿತರ ಉತ್ಪನ್ನಗಳ ಬೆಲೆ ಕೂಡ ಏರುಮುಖವಾಗಿವೆ. ಚಹಾಪುಡಿಯ ಬೆಲೆ ಶೇ.21ರಷ್ಟು ತುಟ್ಟಿಯಾಗಿದ್ದರೆ, ಉದ್ದಿನಬೇಳೆ ಮತ್ತು ಹೆಸರುಬೇಳೆಗಳು ಕೂಡ ಬಡಜನತೆಯಿಂದ ದೂರ ಸರಿಯುತ್ತಿವೆ.

ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶದ ಏಪ್ರಿಲ್ ತಿಂಗಳ ಕೈಗಾರಿಕಾ ಉತ್ಪಾದನಾ ದರ ಕಳೆದ 15 ವರ್ಷಗಳಲ್ಲೇ ಅತೀ ಹೆಚ್ಚು ಏರಿಕೆ ದಾಖಲಿಸಿತ್ತು. ದೇಶದ 3ಜಿ ತರಂಗಾಂತರ ಸೇವೆಯ ಹರಾಜಿನಿಂದ ಹಾಗೂ ಮುಂದೆ ಕಂಪನಿಗಳು ಮುಂಗಡ ತೆರಿಗೆ ಪಾವತಿಸಬೇಕಾಗಿರುವದರಿಂದಲೂ ಮತ್ತು ಯೂರೋಪ್ ನ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಮಾರುಕಟ್ಟೆಯಲ್ಲಿ ನಗದು ಹರಿವಿನ ಪ್ರಮಾಣ ಕಡಿಮೆಯಾಗಿದ್ದು ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಏರಿಸುವುದನ್ನು ಮುಂದೆ ಹಾಕಲಿದೆ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X