ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಡೋಮ್ ನೊಳಗೆ ಬಂಧಿಯಾದ ವಿಶ್ವಕಪ್

By * ಮಲೆನಾಡಿಗ
|
Google Oneindia Kannada News

FIFA WC 2010 human traffickling
ದಕ್ಷಿಣ ಆಫ್ರಿಕಾದಲ್ಲಿ ಫೀಫಾ ವಿಶ್ವಕಪ್ ಹಬ್ಬ ಆರಂಭವಾಗಿದೆ. ಅಭೂತಪೂರ್ವ ಭದ್ರತೆಯನ್ನು ಸಹ ಒದಗಿಸಲಾಗಿದೆ. ಈ ಜಾಗತಿಕ ಸಮರದಲ್ಲಿ ಭಾಗವಹಿಸುತ್ತಿರುವ ಎಲ್ಲಾ 32 ದೇಶಗಳು, ಆಯೋಜಕರು, ಇಡೀ ಆಫ್ರಿಕಾ ಖಂಡವೇ ಸಿಂಗಾರಗೊಂಡು ಸಂಭ್ರಮಿಸುತ್ತಿದೆ.. ಇದರ ಜೊತೆಜೊತೆಗೆ ಹೆಚ್ಚಾಗುವ ಕ್ರೈಂ ರೇಟ್ ಗಳ ಬಗ್ಗೆ ಪೊಲೀಸರು ಚಿಂತಿತರಾಗಿದ್ದಾರೆ.

ಜಗತ್ತಿನ ಅತಿ ಪ್ರಮುಖ ಕ್ರೈಂಗಳಾದ ಡ್ರಗ್ಸ್ ಮಾಫಿಯಾ, ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆ ಬಗ್ಗೆ ದಕ್ಷಿಣ ಆಫ್ರಿಕಾ ಪೊಲೀಸರಿಗೆ ಅಷ್ಟು ಚಿಂತೆ ಇಲ್ಲ. ಆದರೆ ಬೃಹದಾಕಾರವಾಗಿ ಬೆಳೆಯುತ್ತಿರುವ ಹಾಗೂ ತ್ವರಿತವಾಗಿ ಬೆಳೆಯುತ್ತಿರುವ ಜಗತ್ತಿನ 3ನೇ ಪ್ರಮುಖ ಕ್ರೈಂ ಆದ ಮಾನವ ಕಳ್ಳಸಾಗಾಣಿಕೆ, ಸೆಕ್ಸ್ ಟೂರಿಸಂ ಹೆಸರಿನಲ್ಲಿ ನಿರ್ಭಿಡೆಯಾಗಿ ನಡೆಯುವ ವೇಶ್ಯಾವಾಟಿಕೆಯನ್ನು ನಿಯಂತ್ರಿಸುವುದು ದಕ್ಷಿಣ ಆಫ್ರಿಕಾ ಪೊಲೀಸರಿಗೆ, ಫೀಫಾ ವಿಶ್ವಕಪ್ ಗೆ ಭದ್ರತೆ ಒದಗಿಸುವುದಕ್ಕಿಂತ ಬಹುಪಾಲು ಕಷ್ಟದ ಹಾಗೂ ಸೂಕ್ಷ್ಮವಾದ ವಿಚಾರವಾಗಿದೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ

ಯುನ್ ಒ ಎಚ್ಚರಿಕೆ:ವಿಶ್ವಕಪ್ ಆಯೋಜಕರಿಗೆ ಹಾಗೂ ದಕ್ಷಿಣ ಆಫ್ರಿಕಾಕ್ಕೆ ಸೆಕ್ಸ್ ಟೂರಿಸಂ ಹೆಸರಲ್ಲಿ ಅಪ್ರಾಪ್ತವಯಸ್ಕರ ಅದರಲ್ಲೂ ಹಸುಳೆಗಳನ್ನು ವೇಶ್ಯಾವಟಿಕೆಗೆ ಬಳಸಿಕೊಳ್ಳುವ ಜಾಲದ ಬಗ್ಗೆ ಯುನ್ ಒ ಕೂಡಾ ಎಚ್ಚರಿಕೆ ನೀಡಿದೆ. ಕೋಟ್ಯಾಂತರ ಕಾಂಡೋಮ್ ಗಳು ದಕ್ಷಿಣ ಆಫ್ರಿಕಾದೆಲ್ಲೆಡೆ ಹರಿದಾಡುವಂತೆ ಮಾಡಲಾಗಿದೆ. ಬಾವುಟ ಮಾರಾಟಗಾರರಿಂದ ಹಿಡಿದು ಮೈದಾನಕ್ಕೆ ತೆರಳುವ ಪ್ರತಿ ಅಭಿಮಾನಿಗಳಿಗೂ ಬೆಲೆವೆಣ್ಣುಗಳ ಬಗ್ಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.

ಸೆಕ್ಸ್ ಹಾಗೂ ಮದ್ಯ ಬ್ರೆಜಿಲ್ ಗೆಲುವಿಗೆ ಕಾರಣ ಎಂದು ಬ್ರೆಜಿಲ್ ನ ಮಾಜಿ ಆಟಗಾರ ಹೇಳಿಕೆ ನೀಡಿದ ಮೇಲೆ, ಫುಟ್ಬಾಲ್ ಹಾಗೂ ಸೆಕ್ಸ್ ಗೂ ಅನ್ಯೋನ್ಯ ನಂಟು ಜಗ್ಗಜಾಹೀರಾಗಿದೆ. ಸೆಕ್ಸ್ ತಡೆಯಲು ಸಾಧ್ಯವಿಲ್ಲ. ಆದರೆ, ಏಡ್ಸ್ ತಡೆಗಟ್ಟಬಹುದು . ಅದಕ್ಕಾಗಿ ಕಾಂಡೋಮ್ ಬಳಸಿ ಎಂದು ಎಲ್ಲೆಡೆ ಪ್ರಚಾರ ಮಾಡುತ್ತಿದ್ದೇವೆ ಎಂದು ಆಯೋಜಕರು ಹೇಳುತ್ತಾರೆ.

ಜೀತಪದ್ಧತಿಗೆ ಒಳಪಡದ ದೇಶವೇ ಇಲ್ಲ ಅನ್ನಬಹುದು. ಮಾನವ ಕಳ್ಳ ಸಾಗಣೆಗೆ ಸರಿಯಾದ ಲೆಕ್ಕವಿಲ್ಲವಿದ್ದರೂ ಸುಮಾರು 2 ಕೋಟಿಗೂ ಅಧಿಕ ಜನರು ಅತ್ಯಂತ ಅಭಿವೃದ್ಧಿ ಹೊಂದಿದ ದೇಶದ ಗಡಿ ದಾಟುತ್ತಿದ್ದಾರೆ.

ಅಪ್ರಾಪ್ತರ ಸಂಖ್ಯೆ ಅಧಿಕ: ಹಸುಳೆಗಳನ್ನು ಕಾಮಕೂಪಕ್ಕೆ ತಳ್ಳುವ ವಿಟರು ವಾರ್ಷಿಕವಾಗಿ ಏನಿಲ್ಲವೆಂದರೂ 7ರಿಂದ 10 ಕೋಟಿ ಯುಎಸ್ ಡಾಲರ್ ಗಳಿಸುತ್ತಿದ್ದಾರೆ. ಡ್ರಗ್ ಮಾಫಿಯಾಗೆ ಹೆದರಿದ್ದ ಅಮೆರಿಕ ಈಗ ಅಪ್ರಾಪ್ತ ವಯಸ್ಕರ ಸಾಗಾಣಿಕೆಗೆ ಬೆಚ್ಚಿದೆ. 18 ರ ವಸಂತವನ್ನೂ ಕಾಣದ ಶೇ.30 ರಷ್ಟು ಮಂದಿ ಈ ದಂಧೆಯಲ್ಲಿ ತೊಡಗಿದ್ದಾರೆ.

'ನಾವೇನು ಕ್ರಿಮಿನಲ್ ಗಳಲ್ಲ. ನಮ್ಮದೇನೂ ತಪ್ಪಿಲ್ಲ. ಕಾಮತೃಷೆಯಿಂದ ಬಳಲುವ ಜನರಿಗೆ ತೃಪ್ತಿನೀಡುತ್ತಿದ್ದೇವೆ. ಆಫ್ರಿಕಾದ ಬಡತನ ನೀಗಿಸಲು ಇದು ಒಂದು ಮಾರ್ಗ ಎನ್ನಬಹುದು. ವಿಶ್ವಕಪ್ ನಮಗೆ ಸಿಕ್ಕಿರುವ ಸುವರ್ಣಾವಕಾಶ' ಎಂದು ದಕ್ಷಿಣ ಆಫ್ರಿಕಾ ವೇಶ್ಯೆ ಯೊಬ್ಬಳು ಹೇಳುತ್ತಾಳೆ.

ಸ್ಥಳೀಯ ವೇಶ್ಯೆಯರಲ್ಲದೆ ಚೀನಾ, ಪಾಕಿಸ್ತಾನ, ಭಾರತ, ಹಾಂಗ್ ಕಾಂಗ್, ವೆನಿಜುವೆಲ ಮುಂತಾದೆಡೆಯಿಂಡ ನುರಿತ ಸೆಕ್ಸ್ ವರ್ಕರ್ಸ್ ಗಳು ವಿಶ್ವಕಪ್ ನಗರಿಗಳನ್ನು ಸುತ್ತುವರೆದಿದ್ದಾರೆ. ಸುರಕ್ಷತಾ ನಿಯಮ ಖಂಡಿತಾ ಪಾಲಿಸುತ್ತೇವೆ. ಆದರೆ ಹೆಚ್ಚಿನ ಪುರುಷರು ನೋ ಕಾಂಡೋಮ್ ಎಂದು ಹೆಚ್ಚಿನ ಹಣ ನೀಡಿದರೆ, ಕೈಯೊಡ್ಡದೇ ಇರಲು ಸಾಧ್ಯವಿಲ್ಲ. ಈ ಹಬ್ಬದ ವಾತಾವರಣದಲ್ಲೇ ನಮಗೆ ದುಡಿಮೆ, ನಮಗೂ ಕನಸಿದೆ ಎಂಬ ಮಾತಿಗೆ ಮೌನವೇ ಉತ್ತರ.

English summary
FIFA World Cup 2010 Now RSA Policemen attention is increasingly focused on world's third most bigger crime boom in the South African tourism industry: human trafficking and Sex toursim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X