ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವಳಿಗಳನ್ನು ಹೆತ್ತ 66 ರ ಹರೆಯದ ಅಜ್ಜಿ!

By Mahesh
|
Google Oneindia Kannada News

Bhateri Devi
ಚಂಡೀಗಢ, ಜೂ.14: ಸುಮಾರು 44 ವರ್ಷಗಳ ಸುದೀರ್ಘ ಅವಧಿಗಳ ಕಾಲದ ಬಂಜೆತನವನ್ನು ನೀಗಿಸಿಕೊಂಡಿರುವ 66 ವರ್ಷದ ಮಹಿಳೆ, ತ್ರಿವಳಿಗಳಿಗೆ ಜನ್ಮ ನೀಡಿದ ಸಾಧನೆ ಮೆರೆದ ಅತ್ಯಂತ ಹಿರಿಯ ಜೀವಿ ಎನಿಸಿದ್ದಾರೆ.

ಮಗುವನ್ನು ಪಡೆಯಲೇಬೇಕೆಂಬ ಅದಮ್ಯ ಬಯಕೆಗೆ ಬಿದ್ದ ಭಟೇರಿದೇವಿ ಅನಾರೋಗ್ಯದ ನಡುವೆಯೂ ಹೋರಾಟ ನಡೆಸಿ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಸಾಧನೆ ಮೆರೆದಿದ್ದಾರೆ.

ರೋಹ್ಟಕ್ ಜಿಲ್ಲೆಯ ಮದೀನಾ ಗ್ರಾಮದಲ್ಲಿ ಭಟೇರಿ ದೇವಿ ಮೇ 21,1944 ರಂದು ಜನಿಸಿದ್ದು ಎಂದು ಅವರ ಜನನ ಪ್ರಮಾಣ ಪತ್ರದಿಂಡ ದೃಢಪಟ್ಟಿದೆ. ಹಾಗಾಗಿ ಪ್ರಪಂಚದ ಅತ್ಯಂತ ಹಿರಿಯ ತಾಯಿ ಎನ್ನಬಹುದು ಎಂದು ಡಾ.ಅನುರಾಗ್ ಬಿಸ್ನೋಯ್ ಹೇಳುತ್ತಾರೆ.

In-vitro Fertilisation (IVF) ಹಾಗೂ ಅಂಡಾಣು ಉತ್ಪತ್ತಿ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಿದ್ದರು. ತ್ರಿವಳಿಗಳು ಆರೋಗ್ಯದಿಂದಿದ್ದು 1.2ಕೆಜಿ, 1.1 ಕೆಜಿ ಹಾಗೂ 800 ಗ್ರಾಂ ತೂಕ ಹೊಂದಿವೆ. ತೂಕ ಕಮ್ಮಿಯಿದ್ದರಿಂದ ತೀವ್ರನಿಗಾಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸತ್ರೋಡ್ ಗ್ರಾಮ ನಿವಾಸಿ ಭಟೇರಿ ದೇವಿಯ ಪತಿ ದೇವ ಸಿಂಗ್ , ಈ ವಯಸ್ಸಿನಲ್ಲಿ ಮೂರು ಮಕ್ಕಳ ತಂದೆಯಾಗಿದ ಸಂಭ್ರಮದಲ್ಲಿ ಗ್ರಾಮಕ್ಕೆ ಸಿಹಿ ಹಂಚಿದ್ದಾರೆ. ಮಜಾ ಅಂದ್ರೆ, ದೇವ ಸಿಂಗ್ ರ ಮೊದಲ ಪತ್ನಿ ಭಟೇರಿಗೆ ಮಕ್ಕಳಾಗದ ಕಾರಣ ಇನ್ನೂಇಬ್ಬರನ್ನು ದೇವ ಸಿಂಗ್ ಮದುವೆಯಾಗಿದ್ದರು. ಆದರೆ, ಆ ಇಬ್ಬರಿಗೂ ಮಕ್ಕಳಾಗಿರಲಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X