ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾದಿಂದ ಅಗ್ಗದ ದರ ಮನೆ ನಿರ್ಮಾಣ

By Mahesh
|
Google Oneindia Kannada News

Tata Housing
ಕೋಲ್ಕತ್ತಾ, ಜೂ.13: ಅಗ್ಗದ ದರದ ಕಾರು ನ್ಯಾನೋ ಪರಿಚಯಿಸಿದ ಟಾಟಾ ಸಂಸ್ಥೆ, ಈ ಅಗ್ಗದ ದರದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದೆ. ಟಾಟಾ ಹೌಸಿಂಗ್ ಡೆವಲಪ್ ಮೆಂಟ್ ಕಂಪೆನಿ ಲಿಮಿಟೆಡ್ (THDCL) 10 ಲಕ್ಷ ರೂಪಾಯಿ ಒಳಗಿನ ವಸತಿ ಸಮುಚ್ಚಯ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಿದೆ.

ದೇಶಾದ್ಯಂತ 110ಲಕ್ಷ ಚದರ ಅಡಿಗಳಷ್ಟು ಭೂಮಿಯನ್ನು ಕಂಪನಿ ಹೊಂದಿದೆ. ಈ ಹಣಕಾಸು ವರ್ಷದ ಅಂತ್ಯದೊಳಗೆ ಇನ್ನೂ 300ಲಕ್ಷ ಚದರ ಅಡಿಗಳಷ್ಟು ಜಾಗವನ್ನು ಖರೀದಿಸಲಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬ್ರೋತಿನ್ ಬ್ಯಾನರ್ಜಿ ಹೇಳಿದರು.

2010-11 ರಲ್ಲಿ ಕಂಪೆನಿ 1,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದ್ದು ಇದರಲ್ಲಿ 450-500 ಕೋಟಿ ರೂಪಾಯಿಗಳನ್ನು ಭೂ ಸ್ವಾಧೀನಕ್ಕಾಗಿ ವ್ಯಯ ಮಾಡಲಿದೆ ಎಂದೂ ಅವರು ಹೇಳಿದರು. ಇನ್ನುಳಿದ ಹಣದಲ್ಲಿ 45 ಲಕ್ಷ ಚದರ ಅಡಿಗಳಷ್ಟು ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು ಇದರಲ್ಲಿ ಶೇ.20ರಷ್ಟು ವಾಣಿಜ್ಯ ಕಟ್ಟಡಗಳಾಗಲಿವೆ ಎಂದರು.

ಆಮ್ ಆದ್ಮಿಗೆ ಶುಭ ಗೃಹ: ಕಂಪೆನಿ 10 ಲಕ್ಷ ರೂಪಾಯಿ ಒಳಗಿನ ಶುಭ ಗೃಹ ಹೆಸರಿನ ಮನೆಗಳ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ಹೊಂದಿದ್ದು ಮುಂಬೈ ನ ಪೊಯಿಸರ್ ನಲ್ಲಿ ನಿರ್ಮಾಣ ಮಾಡಲಿರುವ ವಸತಿ ಸಮುಚ್ಚಯದಲ್ಲಿ ಮನೆ ದರ ರೂ 4 ರಿಂದ 7 ಲಕ್ಷ ರುಪಾಯಿ ಆಗಲಿದೆ.

ಅನೇಕ ಸಂಸ್ಥೆಗಳು ಈ ರೀತಿಯ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದರೂ ಯಾರೂ ಯಶಸ್ವಿಯಾಗಿಲ್ಲ ಎಂದೂ ಅವರು ಹೇಳಿದರು. ಶುಭ ಗೃಹ ಯೋಜನೆಯಡಿ ದೇಶಾದ್ಯಂತ 1,500 ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸಲಾಗುತ್ತಿದ್ದು ಮುಂದಿನ 3-4 ವರ್ಷಗಳಲ್ಲಿ ಇದನ್ನು 4000ಕ್ಕೆ ಏರಿಸಲಾಗುವುದು ಎಂದೂ ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X