ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ ಹಿಂದೂ ಸಮಾಜದ ದೊಡ್ಡ ಆಸ್ತಿ

By Mahesh
|
Google Oneindia Kannada News

Pramod Mutalik Meets Swami Nithyananda
ರಾಮನಗರ, ಜೂ.13: ಕ್ರಿಶ್ಚಿಯನ್ ಮತಕ್ಕೆ ಸೇರಿದ ನಿತ್ಯಾನಂದನ ಡ್ರೈವರ್ ಲೆನಿನ್ ಮೂಲಕ ಕ್ರಿಶ್ಚಿಯನ್ ಮಿಷನರಿಗಳು ಪಿತೂರಿ ಮಾಡಿ ಸರಿಯಾದ ಆರೋಪವಿಲ್ಲದೆ, ಅನ್ಯಾಯವಾಗಿ ಸ್ವಾಮಿ ನಿತ್ಯಾನಂದ ಅವರನ್ನು ಜೈಲಿಗೆ ದೂಡಿದರು.

ನಾನು ಹಿಂದೂ ಪರ ಸಂಘಟನೆಯ ಮುಖ್ಯಸ್ಥನಾಗಿ ನಿತ್ಯಾನಂದ ಅವರಿಗೆ ಬೆಂಬಲ ವ್ಯಕ್ತಪಡಿಸಲು ಬಂದಿದ್ದೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಇಂದು ಬಿಡದಿ ಬಳಿಯ ನಿತ್ಯಾನಂದ ಧ್ಯಾನಪೀಠಂಗೆ ಭೇಟಿ ನೀಡಿದ ಮುತಾಲಿಕ್ , ಪಂಚಾಗ್ನಿ ತಪ ನಿರತರಾಗಿದ್ದ ನಿತ್ಯಾನಂದ ಹಾಗೂ ಅವರ ಅನುಯಾಯಿಗಳ ಜಪತಪ ಹೋಮಾದಿಗಳು ಮುಗಿದ ನಂತರ ಭೇಟಿ ಮಾಡಿ ಮಾತನಾಡಿದರು.

ಆಶ್ರಮದಿಂದ ಹೊರಬಂದನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸ್ವಾಮಿ ನಿತ್ಯಾನಂದ ಹಿಂದೂ ಸಮಾಜದ ಬಹುದೊಡ್ಡ ಆಸ್ತಿ. ಸುಮಾರು 34ಕ್ಕೂ ಅಧಿಕ ದೇಶಗಳಿಗೆ ತಮ್ಮ ಧ್ಯಾನ, ಯೋಗಗಳ ಮೂಲಕ ಹಿಂದೂ ಸಂಸ್ಕೃತಿಯನ್ನು ಪರಿಚಯಿಸಿದ ಪರಮಹಂಸ ನಿತ್ಯಾನಂದನ ವಿರುದ್ಧ ಕ್ರಿಶ್ಚಿಯನ್ ಸಂಘಟನೆಗಳು ವ್ವ್ಯವಸ್ಥಿತವಾಗಿ ಪಿತೂರಿ ನಡೆಸಿ, ಕೋಟ್ಯಾಂತರ ಹಣ ಸುರಿದು, ನಿತ್ಯಾನಂದ ಸ್ವಾಮಿಗೆ ಅಪಮಾನ ಮಾಡಿದ್ದಾರೆ ಎಂದರು.

ಸುಮಾರು 54 ದಿನಗಳ ಸೆರೆವಾಸದ ನಂತರ ರಾಸಲೀಲೆ ಖ್ಯಾತಿಯ ಬಿಡದಿ ಧ್ಯಾನಪೀಠಂನ ಸ್ವಾಮಿ ನಿತ್ಯಾನಂದನಿಗೆ ಷರತ್ತುಬದ್ಧ ಜಾಮೀನಿನ ಮೇಲೆ ರಾಮನಗರ ಜೈಲಿನಿಂದ ಶನಿ ಅಮಾವಾಸ್ಯೆ ದಿನದಂದು ಬಿಡುಗಡೆ ಭಾಗ್ಯ ಸಿಕ್ಕಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X