ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಣಿ ಸ್ಫೋಟ ಮದನಿ ವಿಚಾರಣೆ ಇಲ್ಲವೇಕೆ?

By Mahesh
|
Google Oneindia Kannada News

Abdul Madani
ಬೆಂಗಳೂರು,ಜೂ.13: ಬೆಂಗಳೂರು ಸರಣಿ ಸ್ಫೋಟದ ಶಂಕಿತ ಪ್ರಮುಖ ಆರೋಪಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ನಗರ ಪೊಲೀಸರು ಈವರೆಗೆ ವಿಚಾರಣೆಗೊಳಪಡಿಸಿಲ್ಲ. ಆದರೆ ಆತನ ಪತ್ನಿ ಸೂಫಿಯಾಳನ್ನು ವಿಚಾರಣೆಗೆಒಳಪಡಿಸಿದ್ದಾರೆ.

ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಬಂಧಿಸಿದಂತೆ 1998 ರಲ್ಲಿ ಮದನಿ ಎರಡು ವರ್ಷ ಸೆರೆಮನೆ ವಾಸ ಅನುಭವಿಸಿದ್ದಾನೆ. ಆ ದುರಂತದಲ್ಲಿ 52 ಮಂದಿ ಮೃತಪಟ್ಟಿದ್ದರು. ಆದರೆ ಅಂತಿಮವಾಗಿ ನ್ಯಾಯಾಲಯ ಮದನಿ ಅವರನ್ನು ಖುಲಾಸೆ ಮಾಡಿತ್ತು.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಆರೋಪ ಪಟ್ಟಿ ದಾಖಲಾಗಿದ್ದು ಮತ್ತು ಹೆಚ್ಚುವರಿ ಸಾಕ್ಷ್ಯವನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಒಟ್ಟು32 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.ಇದರಲ್ಲಿ 12 ಜನ ನಾಪತ್ತೆಯಾಗಿದ್ದಾರೆ. ಮೂವರು ವಿದೇಶಗಳಲ್ಲಿ ಆಶ್ರಯ ಪಡೆದಿರುವ ಶಂಕೆಯಿದೆ ಎಂದು ಜಂಟಿ ಆಯುಕ್ತ (ಕೈಂ) ಅಲೋಕ್ ಕುಮಾರ್ ಹೇಳಿದರು.

2008ರ ಜುಲೈ 25 ರಂದು ಸಂಭವಿಸಿದ ಸರಣಿ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿದ್ದರು. ಭಯೋತ್ಪಾದಕ ನಿಗ್ರಹ ಘಟಕ ಪ್ರಕರಣ ಬೇಧಿಸಲು ಏಳು ತಿಂಗಳ ಕಾಲ ತನಿಖೆ ನಡೆಸಿತು. ಅಂದು ಭಯೋತ್ಪಾದಕರ ಷಡ್ಯಂತ್ರವನ್ನು ಕಾರ್ಯರೂಪಕ್ಕೆ ತಂದವರು ಲಷ್ಕರ್ ಎ ತೊಯ್ಬಾದ ನಾಯಕ ರಿಯಾಜ್ ಭಟ್ಕಳ್ ಸಹಚರರು ಎಂಬ ಆತಂಕಕಾರಿ ಅಂಶ ಹೊರಬಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರು ಬಂಧಿಸಿದವರಲ್ಲಿ ತಂದೆ-ಮಗ ಸೇರಿದಂತೆ ಒಂಬತ್ತು ಮಂದಿ ಇದ್ದರು. ಪೊಲೀಸರ ವಶದಲ್ಲಿದ್ದವರು ಮಹಮದ್ ಸಮಿ, ಸಫ್ರುದ್ದಿನ್ ಹಾಗೂ ಆತನ ತಂದೆ ಅಬ್ದುಲ್ ಸತ್ತಾರ್, ಮುನಾಫ್, ಜಕಾರಿಯ ಅಬ್ದುಲ್ ಜಲೀಲ್, ಮುಜೀಬ್, ಮಹ್ಮದ್ ಫೈಜಲ್ ಮತ್ತು ಬದರುದ್ದಿನ್. ಬಂಧಿತರಲ್ಲಿ ಎಂಟು ಮಂದಿ ಕೇರಳ ವಿವಿಧ ಸ್ಥಳದವರು. ಆದರೆ ಸಮಿ ಕರ್ನಾಟಕದ ಬಿಜಾಪುರದವ. ಕಾರ್ಮಿಕರಂತೆ ನಟಿಸಿದ ಆರೋಪಿಗಳು ಬಾಂಬ್ ಇಟ್ಟಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X