ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಹುಲಿ ಮರಣ; ಖೇಣಿ ಹುಲಿ ದತ್ತು

By Mahesh
|
Google Oneindia Kannada News

Tigress dies in Bannerghattha National Park
ಬೆಂಗಳೂರು, ಜೂ.13: ಬನ್ನೇರುಘಟ್ಟ ಬಿಎಫ್ ಎಫ್ ಆವರಣ ಇಂದು ಲಂಡನ್ ಮೂಲದ 16 ವರ್ಷದ ಜೂಡಿ ಎಂಬ ಹುಲಿ ಸಾವನ್ನಪ್ಪಿದೆ. 9 ವರ್ಷದ ಕೆಳಗೆ ಲಂಡನ್ ನಿಂದ ವಿಮಾನದಲ್ಲಿ ಇಲ್ಲಿಗೆ ತರೆಸಿಕೊಳ್ಳಲಾಗಿತ್ತು. ಕೆಲ ತಿಂಗಳುಗಳಿಂದ ಅನಾರೋಗ್ಯ ಪೀಡಿತವಾಗಿತ್ತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಖೇಣಿ ದತ್ತು ಪಡೆದ ಹುಲಿಗಳು ಆರೋಗ್ಯವಾಗಿದೆ. ಅದಕ್ಕೂ ಇದಕ್ಕೂ ಏನಕೇನ ಸಂಬಂಧವಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.

ಸ್ಥಿತಿವಂತ ಖೇಣಿ ಉತ್ತಮ ಕೆಲಸ: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಯವರು ಬನ್ನೇರುಘಟ್ಟ ಜೈವಿಕ ಉದ್ಯಾನದ ಎರಡು ಹುಲಿಗಳನ್ನುಆಜೀವ ಪರ್ಯಂತ ದತ್ತು ಪಡೆದಿದ್ದಾರೆ. ಉದ್ಯಾನಕ್ಕೆ ಪುತ್ರ ನಿಖಿಲ್‌ನ ಜತೆ ಶನಿವಾರ ಭೇಟಿ ನೀಡಿ ಎರಡು ಹುಲಿಗಳನ್ನು ದತ್ತು ಸ್ವೀಕರಿಸಿದ್ದರು.

ತಮ್ಮ ಕುಟುಂಬಕ್ಕೆ ಹುಲಿ ಪ್ರಿಯವಾದ ಪ್ರಾಣಿ ಎಂದ ಖೇಣಿ, ಮೂರು ವರ್ಷದ ಬಿಳಿ ಹುಲಿ ಹಾಗೂ ರಾಯಲ್ ಬೆಂಗಾಲ್ ಗಂಡು ಹುಲಿಗಳನ್ನು ದತ್ತು ಪಡೆದು , ದಾಖೆಲೆ ಪತ್ರಗಳಿಗೆ ಸಹಿ ಹಾಕಿದರು. ದತ್ತು ಪಡೆದ ಮರಿಗಳಿಗೆ ಅವರ ಮಕ್ಕಳಾದ ನಿಕಿಲ್ ಹಾಗೂ ಬಾಬಿ ಹೆಸರನ್ನೇ ಇಟ್ಟು ಖೇಣಿ ನಾಮಕರಣ ಮಾಡಿದರು.

ಹುಲಿಯೊಂದಕ್ಕೆ ವಾರ್ಷಿಕ 1.45 ಲಕ್ಷ ರು. ವೆಚ್ಚವಾಗಲಿದ್ದು, ಅವು ಬದುಕಿರುವಷ್ಟು ಕಾಲ ನಿರಂತರವಾಗಿ ಆ ವೆಚ್ಚವನ್ನು ಭರಿಸಲಾಗುವುದು. ಇದಕ್ಕಾಗಿ ವಾರ್ಷಿಕ 2.90ಲಕ್ಷ ರು. ಬಡ್ಡಿ ಬರುವಂತೆ ಬ್ಯಾಂಕಿನಲ್ಲಿ ಹುಲಿಗಳ ಹೆಸರಲ್ಲಿ ಮೂಲ ಧನವನ್ನು ಠೇವಣಿ ಇಡಲಾಗುವುದು ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X