ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರೆನ್ ಜೊತೆ 'ಬಫೆ'ಟ್ ಮಾಡಲಿರುವ ಸಿರಿವಂತ

By Prasad
|
Google Oneindia Kannada News

Warren Buffett
ನ್ಯೂಯಾರ್ಕ್, ಜೂ. 12 : ವಿಶ್ವದ ಕೋಟ್ಯಾಧಿಪತಿ ಹೂಡಿಕೆದಾರ ವಾರೆನ್ ಬಫೆಟ್ ಜತೆ ಭೋಜನ ಮಾಡುವ ಅವಕಾಶವನ್ನು ಆಸಕ್ತರೊಬ್ಬರು 2.63 ಮಿಲಿಯನ್ ಡಾಲರ್ ತೆತ್ತು ಖರೀದಿಸಿದ್ದಾರೆ.

ವಾರೆನ್ ಬಫೆಟ್ ರ ದತ್ತಿ ಸಂಸ್ಥೆ ಇದನ್ನು ಇ ಬೇ ವೆಬ್ ಸೈಟಿನಲ್ಲಿ ಹರಾಜಿಗಿಟ್ಟಿತ್ತು . 11ನೇ ವರ್ಷದ ಈ ಹರಾಜಿನಲ್ಲಿ ಕಳೆದ ವರ್ಷದ ಹರಾಜು ಮೊತ್ತವಾದ 2.11 ಮಿಲಿಯನ್ ಡಾಲರ್ ಗಳಿಗಿಂತ 52 ಮಿಲಿಯನ್ ಡಾಲರ್ ಅಧಿಕ ಮೊತ್ತ ಲಭಿಸಿದೆ. 2009ರಲ್ಲಿ ಈ ಹರಾಜಿನಿಂದ 1.68 ಮಿಲಿಯನ್ ಡಾಲರ್ ಆದಾಯ ಲಭಿಸಿತ್ತು.

ಈ ಹರಾಜಿನ ಯಶಸ್ವಿ ಬಿಡ್‌ದಾರರು ತಮ್ಮ 7 ಮಂದಿ ಗೆಳೆಯರ ಜತೆ ವಿಶ್ವದ ಮೂರನೇ ಅತೀ ದೊಡ್ಡ ಶ್ರೀಮಂತ ವಾರೆನ್ ಬಫೆಟ್ ಜತೆ ಮ್ಯಾನ್ ಹಟನ್ ನ ಐಷಾರಾಮಿ ರೆಸ್ಟೊರೆಂಟ್ ಸ್ಮಿತ್ ಅಂಡ್ ವೊಲ್ಲೆನ್ಸ್ಕಿ ಸ್ಟೀಕ್ ಹೌಸ್ ನಲ್ಲಿ ಭೋಜನ ಮಾಡುವ ಅವಕಾಶ ಪಡೆದಿದ್ದಾರೆ. ಈ ಹರಾಜಿನಿಂದ ಬಂದ ಸಂಪೂರ್ಣ ಆದಾಯವನ್ನು ಸ್ಯಾನ್ ಪ್ರಾನ್ಸಿಸ್ಕೋ ಮೂಲದ ಗ್ಲೈಡ್ ಫೌಂಡೇಷನ್ ಗೆ ನೀಡಲಾಗುತಿದ್ದು ಈ ದತ್ತಿ ಸಂಸ್ಥೆ ಬಡವರಿಗೆ ಉಚಿತ ಆಹಾರ, ಶಿಕ್ಷಣ ಮತ್ತು ಆರೋಗ್ಯ ರಕ್ಷೆಯನ್ನು ಒದಗಿಸುತ್ತಿದೆ.

ಜಾಗತಿಕ ಅರ್ಥಿಕ ಹಿಂಜರಿತದ ಕಾರಣದಿಂದ ಗ್ಲೈಡ್ ನ ದೇಣಿಗೆಯಲ್ಲಿ ಶೇ.20ರಷ್ಟು ಕುಸಿತವಾಗಿದ್ದು ಸೇವೆಯ ಬೇಡಿಕೆ ಶೇ.30ರಷ್ಟು ಹೆಚ್ಚಳವಾಗಿದೆ. ಗ್ಲೈಡ್ ನ ವಾಷಿಕ ಬಜೆಟ್ 17 ಮಿಲಿಯನ್ ಡಾಲರ್ ಗಳಾಗಿದ್ದು ಇದನ್ನು 2000ನೇ ಇಸವಿಯಲ್ಲಿ ಬಫೆಟ್ ರ ಮೊದಲ ಪತ್ನಿ ಸುಸಾನ್ ಬಫೆಟ್ ರಿಗೆ ಪರಿಚಯಿಸಿದ್ದರು. 2004ರಲ್ಲಿ ಸುಸಾನ್ ಬಫೆಟ್ ಮೃತ ಪಟ್ಟಿದ್ದು ಎರಡು ವರ್ಷಗಳ ನಂತರ ವಾರೆನ್ ಬಫೆಟ್ ತಮ್ಮ 76ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದರು. ವಾರೆನ್ ಬಫೆಟ್ (79) 47 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ. 2006ರಲ್ಲಿ ಬಫೆಟ್ ತಮ್ಮ ಬಹುತೇಕ ಆಸ್ತಿಯನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಹಾಗೂ ಇತರ ನಾಲ್ಕು ಕುಟುಂಬದ ದತ್ತಿ ಸಂಸ್ಥೆಗಳಿಗೆ ಉಯಿಲು ಬರೆದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X