ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಖಂಡದಲ್ಲಿ ವರ್ಣರಂಜಿತ ಫುಟ್ಬಾಲ್ ಹಬ್ಬ ಆರಂಭ

By Rajendra
|
Google Oneindia Kannada News

Grand Opening of FIFA Cup
ಜೋಹಾನ್ಸ್ ಬರ್ಗ್, ಜೂ.12: ಕಪ್ಪು ಕಂಡ ಆಫ್ರಿಕಾದಲ್ಲಿ ಮರೆಯಲಾಗದ ರೋಮಾಂಚಕ ಕ್ಷಣಗಳು. ಜೋಹಾನ್ಸ್ ಬರ್ಗ್ ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ 19ನೇ ವಿಶ್ವಕಪ್ ಟೂರ್ನಿಗೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಿತು. ಈ ಮೂಲಕ ಒಂದು ತಿಂಗಳ ಫುಟ್ ಬಾಲ್ ಹಬ್ಬ್ಬದ ಸಂಭ್ರಮ ಆರಂಭವಾಗಿದೆ.

ದಕ್ಷಿಣಾ ಆಫ್ರಿಕಾದ ಅಧ್ಯಕ್ಷ ಜೇಕಬ್ ಜುಮಾ ಅವರು ಪಂದ್ಯಾವಳಿಯ ಅರಂಭವನ್ನು ಘೋಷಿಸಿದರು. ನಲವತ್ತು ನಿಮಿಷಗಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ದಕ್ಷಿಣಾ ಆಫ್ರಿಕಾ ಮತ್ತು ಮೆಕ್ಸಿಕೋ ತಂಡಗಳು ಅಖಾಡಕ್ಕಿಳಿದವು. ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕ್ರೀಡಾಂಗಣದಲ್ಲಿ ನೆರೆದಿದ್ದ 70 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಂದ್ಯಾವಳಿಯನ್ನು ನೋಡಿ ಪುಳಕಿತರಾದರು. ಒಂದು ಕಾಲದಲ್ಲಿ ವರ್ಣಭೇದ ನೀತಿಯಿಂದ ಇಡೀ ಜಗತ್ತಿನಿಂದ ದೂರವಿದ್ದ ಆಫ್ರಿಕಾ ಇದೀಗ ಫುಟ್ ಬಾಲ್ ವಿಶ್ವಕಪ್ ಮೂಲಕ ಜಗತ್ತಿನ ಗಮನಸೆಳೆಯಿತು.

ಪಂದ್ಯಾವಳಿಯಲ್ಲಿ ಭಾಗವಹಿಸುವ 32 ದೇಶಗಳ ರಾಷ್ಟ್ರಧ್ವಜಗಳು ಹಾರಾಡಿದವು. ಪಂದ್ಯಗಳು ನಡೆಯುವ 9 ಕ್ರೀಡಾಂಗಣಗಳ ವಿವರ ಪರದೆ ಮೇಲೆ ಮೂಡಿಬಂತು. ಹಲವು ಪಾಪ್ ಗಾಯಕರ ಕಂಠಸಿರಿ ಫುಟ್ ಬಾಲ್ ಪ್ರಿಯರನ್ನು ಮತ್ತಷ್ಟು ರಂಜಿಸಿತು. ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ಈ ರೋಮಾಂಚಕ ಕ್ರೀಡೆ ಬಿಳಿಯರು ಮತ್ತು ಕರಿಯರು ಎಂಬ ಭೇದವನ್ನು ಅಳಿಸಿಹಾಕಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X