ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡೇಲಾಗೆ ಮರಿಮೊಮ್ಮಗಳ ಸಾವಿನ ಆಘಾತ

By Prasad
|
Google Oneindia Kannada News

ಜೋಹಾನ್ಸ್ ಬರ್ಗ್, ಜೂ. 11 : ಕಗ್ಗತ್ತಲ ನಾಡೆಂದು ಕರೆಯಲಾಗುವ ದಕ್ಷಿಣ ಆಫ್ರಿಕಾದಲ್ಲಿ ಫೀಫಾ ವಿಶ್ವಕಪ್ ಹೊಂಗಿರಣ ಚೆಲ್ಲುತ್ತಿರುವ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ನೆಲ್ಸನ್ ಮಂಡೇಲಾ ಅವರ ಮರಿಮೊಮ್ಮಗಳು ಕಾರು ಅಪಘಾತದಲ್ಲಿ ಮೃತಳಾಗಿರುವುದು ಮತ್ತೆ ಕತ್ತಲು ಕವಿದಂತೆ ಮಾಡಿದೆ.

13 ವರ್ಷದ ಜೆನಾನಿ ಮಂಡೇಲಾ ಸೊವೆಟೊ ಎಂಬಲ್ಲಿ ವಿಶ್ವಕಪ್ ಮುನ್ನಾದಿನದ ಸಂಗೀತ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ ಅಪಘಾತಕ್ಕೀಡಾಗಿದ್ದಾಳೆ. ಈ ಸುದ್ದಿಯನ್ನು ನೆಲ್ಸನ್ ಮಂಡೇಲಾ ಫೌಂಡೇಶನ್ ದೃಢಪಡಿಸಿದೆ.

ಮಂಡೇಲಾರ 9 ಮರಿಮೊಮ್ಮಕ್ಕಳಲ್ಲಿ ಒಬ್ಬಳಾಗಿರುವ ಜೆನಾನಿ ಬುಧವಾರ, ಜೂನ್ 9ರಂದು 13ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಕಾರು ಅಪಘಾತದಲ್ಲಿ ಬೇರಾರೊಬ್ಬರಿಗೂ ಗಾಯವಾಗಿಲ್ಲ. ಈ ದುಃಖಮಯ ಕ್ಷಣಗಳನ್ನು ಅತ್ಯಂತ ಖಾಸಗಿಯಾಗಿ ಕಳೆಯಬಯಸುತ್ತೇವೆಂದು ನೆಲ್ಸನ್ ಮಂಡೇಲಾ ಕುಟುಂಬ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X