ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಫುಟ್ಬಾಲ್ ಸಮರಕ್ಕೆ ಕ್ಷಣಗಣನೆ

By Mahesh
|
Google Oneindia Kannada News

Mandela to miss Fifa WC opening ceremony
ಜೊಹಾನ್ಸ್‌ಬರ್ಗ್,ಜೂ.11: ದಕ್ಷಿಣ ಆಫ್ರಿಕಾದಲ್ಲಿ ಇಂದು ಸಂಜೆ ವಿಶ್ವಕಪ್ ಫುಟ್ಬಾಲ್ ಸಮರ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಮೆಕ್ಸಿಕೋ ತಂಡಗಳು ಮುಖಾಮುಖಿಯಾಗಲಿದೆ. ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಉರುಗ್ವೆ ಸೆಣಸಲಿವೆ. ಆದರೆ, ನೆಲ್ಸನ್ ಮಂಡೇಲಾ ಅನುಪಸ್ಥಿತಿ ಅತಿಥೇಯರಿಗೆ ನಿರಾಸೆ ತಂದಿದೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ

ಮಂಡೇಲಾ ಅನುಪಸ್ಥಿತಿ: ಮರಿಮೊಮ್ಮಗಳು ಜೆನಾನಿ ಮಂಡೇಲಾ ಸಾವಿನ ಸೂತಕದಲ್ಲಿರುವ ನೆಲ್ಸನ್ ಮಂಡೇಲಾ ಅವರು ಇಂದು ನಡೆಯುವ 40 ನಿಮಿಷಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಫುಟ್ಬಾಲ್ ಅಭಿಮಾನಿಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಈ ಜಾಗತಿಕ ಹಬ್ಬದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ನೆಲ್ಸನ್ ಮಂಡೇಲಾ ಫೌಂಡೇಶನ್ ಹೇಳಿದೆ.

ಜೊಹಾನ್ಸ್‌ಬರ್ಗ್‌ನ ಸಾಕರ್ ಸಿಟಿ ಮೈದಾನದಲ್ಲಿ ನಡೆಯಲಿರುವ ಇಂದಿನ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಕಣಕ್ಕಿಳಿಯುವ ಕಾರಣ ದೇಶದ ಜನ ಮೊದಲ ಪಂದ್ಯವನ್ನು ಕಾತರದಿಂದ ಕಾಯುತ್ತಿದ್ದಾರೆ. ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಪಂದ್ಯ ನಡೆಯಲಿದ್ದು, ಉಭಯ ತಂಡಗಳಿದ ಆಕ್ರಮಣಕಾರಿ ಆಟವನ್ನು ನಿರೀಕ್ಷೆ ಮಾಡಲಾಗಿದೆ.

ವಿಡಿಯೋಗಳು :
ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ

ಸಾಕರ್ ಸಿಟಿಯ ಮೈದಾನದಲ್ಲಿ 90,000 ಪ್ರೇಕಕ್ಷರನಡುವೆ ಉಭಯ ತಂಡಗಳು ಕಾದಾಡಲಿವೆ. ಅಭ್ಯಾಸ ಪಂದ್ಯದಲ್ಲಿ ಉಭಯ ತಂಡಗಳೂ ಉತ್ತಮ ಆಟವನ್ನು ಪ್ರದರ್ಶಿಸಿದೆ. ಹಾಲಿ ಚಾಂಪಿಯನ್ ಇಟಲಿಯನ್ನೇ ಸೋಲಿಸಿರುವ ಮೆಕ್ಸಿಕೋ ತಂಡ ಹೆಚ್ಚಿನ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಇನ್ನೊಂದು ಪಂದ್ಯ ಕೇಪ್ ಟೌನ್ ನಲ್ಲಿ ಉರುಗ್ವೆ ಹಾಗೂ ಫ್ರಾನ್ಸ್ ವಿರುದ್ಧ ನಡೆಯಲಿದ್ದು ಭಾರತೀಯ ಕಾಲಮಾನ ಪ್ರಕಾರ ಮಧ್ಯರಾತ್ರಿ 12ಕ್ಕೆ ಪಂದ್ಯ ಪ್ರಸಾರವಾಗಲಿದೆ. ವಿಶ್ವಕಪ್ ನ ಎಲ್ಲಾ 64 ಪಂದ್ಯಗಳ ನೇರ ಪ್ರಸಾರವನ್ನು ಇಎಸ್ ಪಿಎನ್ ಹಾಗೂ ಸ್ಟಾರ್‍ ಸ್ಪೋರ್ಟ್ ನಲ್ಲಿ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X