ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಭಾಗದತ್ತ ಐಸಿಐಸಿಐ ಬ್ಯಾಂಕ್ ಚಿತ್ತ

By Mahesh
|
Google Oneindia Kannada News

ಮುಂಬೈ, ಜೂ.11: ದೇಶದ ಅತೀ ದೊಡ್ಡ ಖಾಸಗೀ ಬ್ಯಾಂಕ್ ಐಸಿಐಸಿಐ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಶಾಖೆ ತೆರೆಯಲು ಮುಂದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೊಚ್ಚಾರ್ ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳ ಜನರು ಇನ್ನೂ ಸರಿಯಾದ ಹಣಕಾಸು ಸೇವೆ ಪಡೆಯುವಲ್ಲಿ ವಿಫಲರಾಗಿದ್ದು ಉತ್ತಮ ವ್ಯವಹಾರದ ನಿರೀಕ್ಷೆ ಇದೆ ಎಂದಿದ್ದಾರೆ. ಬ್ಯಾಂಕು ಮಾರ್ಚ್ 2010 ಕ್ಕೆ 17,329 ಕೋಟಿ ರೂಪಾಯಿಗಳಷ್ಟು ಕೃಷಿ ಮುಂಗಡ ನೀಡಿದೆ.

ಬ್ಯಾಂಕು ಕಳೆದ ವರ್ಷ 500 ಹೊಸ ಶಾಖೆಗಳನ್ನು ತೆರೆದಿದ್ದು ಒಟ್ಟು ಶಾಖೆಗಳ ಸಂಖ್ಯೆ 2000 ದಾಟಿದೆ. ಬ್ಯಾಂಕ್ ಆಫ್ ರಾಜಾಸ್ಥಾನ್ ಐಸಿಐಸಿಐ ಜೊತೆ ವಿಲೀನಗೊಂಡಿದ್ದರಿಂದ ಗ್ರಾಮೀಣ ಪ್ರದೇಶದತ್ತ ಹೆಚ್ಚನ ಗಮನ ಹರಿಸಿದಂತಾಗಿದೆ. ಬ್ಯಾಂಕ್ ಆಫ್ ರಾಜಾಸ್ಥಾನ್ ನ 463 ಶಾಖೆಗಳಲ್ಲಿ ಶೇ 40 ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿವೆ.

ಬ್ಯಾಂಕು ಗ್ರಾಮೀಣ ಪ್ರದೇಶಗಳಲ್ಲಿನ ಸಾಲದ ಮೊತ್ತವನ್ನು 20 ಸಾವಿರ ಕೋಟಿ ರೂಪಾಯಿಗಳಿಂದ 10,000 ಕೋಟಿ ರೂಪಾಯಿಗಳಿಗೆ ಇಳಿಸಿತ್ತು. ಬ್ಯಾಂಕು 4 ಮಿಲಿಯನ್ ಸಣ್ಣ ರೈತರಿಗೆ ಸಾಲ ಒದಗಿಸಿದ್ದು ಇದರಲ್ಲಿ ಮಾರ್ಚ್ 31,2010 ರವರೆಗೆ 3,179 ಕೋಟಿ ರೂಪಾಯಿ ಬಾಕಿ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X