ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲಂಗಳಿಗೆ ಮಲೇಷಿಯಾ ತಂತ್ರಜ್ಞಾನ ಮನೆ: ಕಟ್ಟಾ

By Mahesh
|
Google Oneindia Kannada News

Katta Subramanya Naidu
ಬೆಂಗಳೂರು, ಜೂನ್ 11: ಬೆಂಗಳೂರು ನಗರದ 58 ಕೊಳಚೆ ಪ್ರದೇಶಗಳಲ್ಲಿ ಬಡಜನರಿಗಾಗಿ ಮೂಲಭೂತ ಸೌಕರ್ಯವುಳ್ಳ 18,000 ಮನೆಗಳನ್ನು 522 ಕೋಟಿ ರು. ವೆಚ್ಚದಲ್ಲಿ ಮಲೇಷಿಯಾ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವುದು ಎಂದು ಅಬಕಾರಿ ವಾರ್ತಾ ಮತ್ತು ಐಟಿ ಬಿಟಿ ಸಚಿವರಾದ ಕಟ್ಟಾಸುಬ್ರಮಣ್ಯ ನಾಯ್ಡು ಅವರು ತಿಳಿಸಿದರು.

18 ಸಾವಿರ ಮನೆಗಳಲ್ಲಿ 8920 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು ಇನ್ನುಳಿದ ಎಲ್ಲಾ ಕಾಮಗಾರಿಗಳು ಮಾರ್ಚ್ 2011 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಮನೆಗಳು ಒಂದು ಹಾಲ್ , ಬೆಡ್ ರೂಂ, ಅಡುಗೆ ಮನೆ ಸ್ನಾನದ ಮನೆ ಹಾಗೂ ಶೌಚಾಲಯವನ್ನು ಒಳಗೊಂಡಿರುತ್ತವೆ.

ಮಲೇಶಿಯಾ ತಂತ್ರಜ್ಞಾನ ಬಳಕೆ: ಮಲೇಶಿಯಾ ದೇಶದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಮನೆ ನಿರ್ಮಾಣ ಮಾಡಿರುವುದು ದೇಶದಲ್ಲಿಯೇ ಪ್ರಥಮ.ಇದು ಕರ್ನಾಟಕ ಸರ್ಕಾರದ ಹೆಗ್ಗಳಿಕೆ. ಈ ತಂತ್ರಜ್ಞಾನದಲ್ಲಿ ಇಟ್ಟಿಗೆ ಜಿಲ್ಲಿ ಬಳಸದೆ, ಸಿಮೆಂಟ್, ಮರಳು ಹಾಗೂ ಫೋಮ್ ಬಳಸಿ 12 ದಿನಗಳ ಅವಧಿಯಲ್ಲಿ ಒಂದು ಮನೆಯನ್ನು ನಿರ್ಮಿಸಲಾಗುವುದೆಂದು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X