ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲಿಕಾಂ ಮಾರುಕಟ್ಟೆ ಮೇಲೆ ರಿಲಾಯನ್ಸ್ ಕಣ್ಣು

By Prasad
|
Google Oneindia Kannada News

Reliance Industries
ಮುಂಬೈ, ಜೂ. 10 : ದೇಶದ ಅತೀ ದೊಡ್ಡ ನೊಂದಾಯಿತ ಕಂಪನಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಕಾರ್ಪೊರೇಟ್ ಟೆಲಿಕಾಂ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿದೆ.

ಮೂಲಗಳ ಪ್ರಕಾರ ಕಂಪನಿಗಳಿಗೆ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೇವೆ ಒದಗಿಸುವ ವಹಿವಾಟು ನಡೆಸಲು ರಿಲಾಯನ್ಸ್ ಯೋಚಿಸುತ್ತಿದೆ. ಇದಕ್ಕಾಗಿ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆಯ ಪರವಾನಗಿಯನ್ನು ಹರಾಜಿನಲ್ಲಿ ಪಡೆದುಕೊಳ್ಳುವ ಕಂಪನಿಯೊಂದನ್ನು ಖರೀದಿಸಲು ನಿರ್ದರಿಸಿದೆ ಎಂದು ತಿಳಿದುಬಂದಿದೆ. ಹಿಮಾಚಲ್ ಫ್ಯೂಚುರಿಸ್ಟಿಕ್ಸ್ ಇನ್ಫೋಟೆಲ್ ಬ್ರಾಡ್ ಬ್ಯಾಂಡ್ ಸರ್ವಿಸಸ್ ನ್ನು ಖರೀದಿಸಲು ರಿಲಯನ್ಸ್ ಯೋಚಿಸುತ್ತಿದೆ ಎನ್ನಲಾಗಿದೆ.

ಟೆಲಿಕಾಂ ಮಾರುಕಟ್ಟೆ ಪ್ರವೇಶಿಸಲು ರಿಲಾಯನ್ಸ್ ನ ಆಡಳಿತ ವರ್ಗ ಈಗಾಗಲೇ ಅನುಮತಿ ನೀಡಿದ್ದು, ಜೂನ್ 18ರಂದು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಯೋಜನೆಯನ್ನು ಬಹಿರಂಗಪಡಿಸಲಿದೆ.

ಎರಡು ವಾರಗಳ ಹಿಂದೆ ಮುಖೇಶ್ ಹಾಗೂ ಅನಿಲ್ ಅಂಬಾನಿ ನಡುವೆ ನಡೆದ ಒಪ್ಪಂದದಲ್ಲಿ ಈ ಹಿಂದೆ ಮಾಡಿಕೊಂಡಿದ್ದ ಅನೇಕ ರಂಗಗಳಲ್ಲಿ ಪರಸ್ಪರ ಸ್ಪರ್ಧಿಸದಿರುವ ಒಪ್ಪಂದವನ್ನು ರದ್ದು ಮಾಡಿರುವದರಿಂದ, ರಿಲಾಯನ್ಸ್ ಅನಿಲ ಆಧಾರಿತ ವಿದ್ಯುತ್ ಕ್ಷೇತ್ರ ಹೊರತುಪಡಿಸಿ ಯಾವುದೇ ಕ್ಷೇತ್ರ ಪ್ರವೇಶಿಸಬಹುದಾಗಿದೆ. 2005ರಲ್ಲಿ ಇಬ್ಬರೂ ಸಹೋದರರು ವಿಭಜನೆಯಾದಾಗ ಕಿರಿಯ ಸಹೋದರ ಅನಿಲ್ ಅಂಬಾನಿ ಪಡೆದ ರಿಲಾಯನ್ಸ್ ಕಮ್ಯುನಿಕೇಷನ್ಸ್ ದೇಶದ ಎರಡನೇ ಅತೀ ದೊಡ್ಡ ಮೊಬೈಲ್ ಸೇವಾ ಕಂಪನಿಯಾಗಿದ್ದು, ಈಗ ಶೇ. 26ರಷ್ಟು ಪಾಲು ಮಾರಾಟ ಮಾಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X