ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿಬಿದನೂರು ಜನತೆಗೆ ತಂಪೆರೆದ ಮಳೆ

By Prasad
|
Google Oneindia Kannada News

Heavy rainfall in Gauribidanur
ಬೆಂಗಳೂರು, ಜೂ. 10 : ಆರಂಭದಲ್ಲಿ ಆರ್ಭಟ ತೋರಿದ ಮುಂಗಾರು ಮಳೆ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತುಸು ಕುಗ್ಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಅತಿ ಹೆಚ್ಚು 6 ಸೆಂ.ಮೀ. ಮಳೆ ಹುಯ್ದಿದೆ. ಜಮಖಂಡಿ, ಬಿಜಾಪುರ, ಕೊರಟಗೆರೆಯಲ್ಲಿ 5 ಸೆಂ.ಮೀ., ಹಳಿಯಾಳದಲ್ಲಿ 4, ಸೌದತ್ತಿ, ಬೆಂಗಳೂರಿನ ಯಲಹಂಕಾ ಮತ್ತು ಜಿಕೆವಿಕೆ, ಹಾಗೂ ತಿಪಟೂರಿನಲ್ಲಿ 3, ಬೆಳಗಾವಿ ವಿಮಾನ ನಿಲ್ದಾಣ, ಚಿಕ್ಕೋಡಿ, ಶಿರಹಟ್ಟಿ, ನರಗುಂದ, ಲಕ್ಷ್ಮೇಶ್ವರ, ರಬಕವಿ, ಬಾಳೆಹೊನ್ನೂರು, ಚಿಕ್ಕಮಗಳೂರು, ಹೆಸರಘಟ್ಟ, ಕಂಪ್ಲಿ, ಚನ್ನಗಿರಿ, ಚಿತ್ರದುರ್ಗ, ರಾಮಪುರ, ಬರಗೂರಿನಲ್ಲಿ 2 ಸೆಂ.ಮೀ. ಮಳೆಯಾಗಿದೆ. ಉಳಿದಂತೆ, ಕಲಘಟಗಿ, ಗದಗ, ಕುಷ್ಟಗಿ, ಕೊಟ್ಟಿಗೆಹಾರ, ಬೆಂಗಳೂರು ನಗರ, ಬೆಂಗಳೂರು ಎಚ್ಎಎಲ್ ಏರ್ಪೋರ್ಟ್, ನೆಲಮಂಗಲ, ಸಿಎನ್ ಹಳ್ಳಿ, ತೊಂಡೆಭಾವಿ ಮತ್ತು ಕೊಣನೂರಿನಲ್ಲಿ ತಲಾ 1 ಸೆಂ.ಮೀ. ಮಳೆ ಬಿದ್ದಿದೆ.

ಮುನ್ಸೂಚನೆ : ಹವಾಮಾನ ಇಲಾಖೆಯ ಪ್ರಕಾರ ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಒಳಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. ಕರಾವಳಿಯ ಕೆಲ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹೇಳಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಗುರುವಾರ 31 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ಇದ್ದು ಮೋಡ ಮುಸುಕಿದ ವಾತಾವರಣವಿದೆ. ಎಂದಿನಂತೆ ಸಾಯಂಕಾಲದಲ್ಲಿ ಮಿಂಚು ಗುಡುಗು ಸಮೇತ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X