ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪ ಸಾಬೀತಾದರೆ ಗಲ್ಲಿಗೇರಿಸಿ: ದೇಶಪಾಂಡೆs

By Mahesh
|
Google Oneindia Kannada News

RV Deshpande
ನವದೆಹಲಿ, ಜೂ. 10: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ನಿಧಿಗೆಂದು ಸಂಗ್ರಹಿಸಿದ್ದ ಕೋಟ್ಯಂತರ ರು ಹಣ ದುರ್ಬಳಕೆಯಾಗಿರುವ ಬಗ್ಗೆ ಎಐಸಿಸಿ ನಾಯಕರಿಗೆ ಸ್ಪಷ್ಟೀಕರಣ ನೀಡಲು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ದೆಹಲಿಗೆ ಆಗಮಿಸಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಮೋತಿಲಾಲ್ ವೋರಾ , ಗುಲಾಂ ನಬಿ ಅಜಾದ್ ಅವರನ್ನು ಭೇಟಿ ಮಾಡಿದ ನಂತರ ಆರ್ ವಿ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ವಿವರಿಸಿದರು.

ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ ನನ್ನನ್ನು ಗಲ್ಲಿಗೇರಿಸಿ, ನನ್ನ ವರ್ಚಸ್ಸಿಗಿಂತ ಪಕ್ಷದ ವರ್ಚಸ್ಸು ಮುಖ್ಯ. ಹೈಕಮಾಂಡಿಗೆ ಸಮಗ್ರವರದಿ ಸಲ್ಲಿಸಿದ್ದೇನೆ. ರಾಜ್ಯದ ಉಸ್ತುವಾರಿ ಹೊಣೆ ಹೊತ್ತಿರುವ ಗುಲಾಂ ನಬಿ ಅಜಾದ್ ಅವರಿಗೂ ಪ್ರಕರಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

ಕಾಂಗ್ರೆಸ್ ನ ಮುಖಂಡರೇ ಷಡ್ಯಂತ್ರ ನಡೆಸಿರುವ ಸಾಧ್ಯತೆಯಿದೆ ಎಂದ ಆರ್ ವಿ ದೇಶಪಾಂಡೆ ಈ ಬಗ್ಗೆ ಅಜಾದ್ ಅವರಿಗೆ ದೂರಿತ್ತಿದ್ದಾರೆ. ಆದರೆ, ದೇಶಪಾಂಡೆ ಯಾರ ಬಗ್ಗೆ ಕೂಡಾ ಅನುಮಾನ ವ್ಯಕ್ತಪಡಿಸಿಲ್ಲ.

ಈ ಬಗ್ಗೆ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ, ತನಿಖೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ತಕ್ಷಣಕ್ಕೆ ಯಾರ ಮೇಲಾದರೂ ಕ್ರಮ ಕೈಗೊಂಡರೆ ಪಕ್ಷಕ್ಕೆ ಇನ್ನಷ್ಟು ಹಾನಿ ಆಗುವ ಸಾಧ್ಯತೆಯ ಶಂಕೆ ಕೂಡಾ ವ್ಯಕ್ತವಾಗಿದೆ.

English summary
Flood Relief Fund
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X