ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳು ದೇವ್ರಿಗೆ ಶರಣೆಂದ ಕನ್ನಡ ಸಿಎಂ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಜೂ. 10: ತಮಿಳುನಾಡಿನ ಕಡಲೂರಿನ ಶ್ರೀದೇವಂತ ಸ್ವಾಮಿ ದೇವಾಲಯಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ಕೋಟಿ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿಎಂ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು ನೀರಿನಲ್ಲಿ ಹೋಮ ಮಾಡಿದ್ದಂತಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಕರ್ನಾಟಕದ ಮುಜರಾಯಿ ಆಯುಕ್ತ ಕೆ.ರಾಮಣ್ಣ ನಾಯಕ್ ಅವರು 1 ಕೋಟಿ ರು.ಮೊತ್ತದ ಡಿಮ್ಯಾಂಡ್ ಡ್ರಾಫ್ಟ್‌ಅನ್ನು ತಮಿಳುನಾಡು ಧಾರ್ಮಿಕ ದತ್ತಿ ಸಚಿವ ಕೆಆರ್ ಪೆರಿ ಕರುಪ್ಪನ್‌ರವರಿಗೆ ನೀಡಿದ್ದಾರೆ.ದೇವಾಲಯದ ಸ್ವಾಮಿ ಹಯಗ್ರೀವರ್ ಸನ್ನಿಧಿ ಜೀರ್ಣೋದ್ಧಾರಕ್ಕೆ ಈ ದೇಣಿಗೆ ಹಣವನ್ನು ವಿನಿಯೋಗಿಸಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಕರವೇಗೆ ಇಲ್ಲ ಬೆಲೆ: ನಮ್ಮ ರಾಜ್ಯದ ನೂರಾರು ದೇಗುಲಗಳು, ಗುಡಿ ಗೋಪುರಗಳು ಪಾಳುಬಿದ್ದಿದೆ, ಸುಣ್ಣಬಣ್ಣ ಬಳಿದು ವರ್ಷಗಳೇ ಕಳೆದಿವೆ. ಸಂಬಂಧಪಟ್ಟ ಇಲಾಖೆಗೆ ಸೂಕ್ತ ಸಚಿವರೇ ನೇಮಕವಾಗಿಲ್ಲ, ಪುರಕ್ಕೆ ಹಿತವನ್ನು ಬಯಸುವ ಪುರೋಹಿತ, ಅರ್ಚಕರ ಪಾಡು ಹೇಳತೀರದು.

ಪರಿಸ್ಥಿತಿ ಹೀಗಿರುವಾಗ, ಯಡಿಯೂರಪ್ಪ ಅವರು ತಮಿಳುನಾಡಿನ ದೇಗುಲಗಳ ಉದ್ಧಾರಕ್ಕೆ ಭಾರಿ ಹಣ ನೀಡಿರುವುದು ಖಂಡನಾರ್ಹ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಬಳಗದ ಕರವೇ ಭಾರಿ ಪ್ರತಿ ಭಟನೆ ನಡೆಸಿತ್ತು. ಆದರೆ, ಇದನ್ನು ಲೆಕ್ಕಿಸದ ಯಡಿಯೂರಪ್ಪ ತಮಿಳುನಾಡು ದೇಗುಲಕ್ಕೆ ದೇಣಿಗೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X