ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಂಗಪಟ್ಟಣ ರಾಜಗೋಪುರದಲ್ಲಿ ಬಿರುಕು

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

ಶ್ರೀರಂಗಪಟ್ಟಣ, ಜೂ.8:ಆಂಧ್ರಪ್ರದೇಶದ ಚಿತ್ತೂರಿನ ಕಾಳಹಸ್ತಿ ದೇವಸ್ಥಾನದ 135 ಅಡಿ ಎತ್ತರದ ರಾಜಗೋಪುರ ಕುಸಿದು ಬಿದ್ದ ಘಟನೆ ಇನ್ನೂ ಕಣ್ಣ ಮುಂದಿರುವಾಗಲೇ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿಯ 65 ಅಡಿ ಎತ್ತರದ ರಾಜಗೋಪುರ ಬಿರುಕು ಬಿಟ್ಟಿರುವುದು[ಚಿತ್ರ ವೀಕ್ಷಿಸಿ] ಆತಂಕ ಸೃಷ್ಟಿಸಿದೆ.

ಗಂಗ ಅರಸರ ಪ್ರಧಾನ ಮಂತ್ರಿಯಾಗಿದ್ದ ತಿರುಮಲರಾಯ ಎಂಬಾತ ಕ್ರಿ.ಶ.894ರ ಅವಧಿಯಲ್ಲಿ ಶ್ರೀರಂಗಸ್ವಾಮಿ ದೇವಾಲಯವನ್ನು ಕಟ್ಟಿಸಿದ್ದು, ಬಳಿಕ ರಾಜಗೋಪುರವನ್ನು 1117ರಲ್ಲಿ ನಿರ್ಮಿಸಲಾಯಿತು ಎನ್ನಲಾಗಿದೆ. ಆ ನಂತರ ಆಡಳಿತ ನಡೆಸಿದ ರಾಜಮಹಾರಾಜರು ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಕಳೆದಎರಡು ಮೂರು ವರ್ಷಗಳ ಹಿಂದೆ ಈ ಗೋಪುರಕ್ಕೆ ಸಿಡಿಲು ಬಡಿದಿದ್ದು ಅದರಿಂದಾಗಿ ಇದೀಗ 5 ಅಂತಸ್ತುಗಳ 65 ಅಡಿ ಎತ್ತರದ ರಾಜಗೋಪುರದ 10 ರಿಂದ 15ನೇ ಅಡಿ ಮೇಲೆ ಬಿರುಕು ಕಾಣಿಸಿದೆ. ಅಲ್ಲದೆ ದಿನದಿಂದ ದಿನಕ್ಕೆ ಈ ಬಿರುಕುಗಳು ವಿಸ್ತರಿಸುತ್ತಿದೆ.

ಗೋಪುರದ ನಿರ್ಮಾಣಕ್ಕೆ ಬಳಸಿದ ಕಾಂಕ್ರಿಟ್ ಸಣ್ಣ ಸಣ್ಣ ಚೂರುಗಳಾಗಿ ನೆಲಕ್ಕೆ ಉದುರುತ್ತಿವೆ. ಇದು ಜನತೆಯಲ್ಲಿ ಭಯ ಹುಟ್ಟಿಸಿದೆ. ಈ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಗಮನಕ್ಕೆ ತರಲಾಗಿದ್ದು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ಸಂಬಂಧಿಸಿದವರು ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X