ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್, ಫೇಸ್ ಬುಕ್ ಜಾಲಕ್ಕೆ ಸಿಐಡಿ ಎಂಟ್ರಿ

By Mahesh
|
Google Oneindia Kannada News

Karnataka CID logs on to Twitter, Facebook‎
ಬೆಂಗಳೂರು, ಜೂ.8: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಜಾಲಕ್ಕೆ ರಾಜ್ಯ ಸಿಐಡಿ ಘಟಕ ಶರಣೆಂದಿದೆ. ಈ ಮೂಲಕ ರಾಷ್ಟ್ರದಲ್ಲಿ ಫೇಸ್‌ಬುಕ್ ಸೇರಿರುವ ಮೊದಲ ಪೊಲೀಸ್ ಘಟಕ ಎಂಬ ಹೆಗ್ಗಳಿಕೆಗೆ ಸಿಐಡಿ ಪಾತ್ರವಾಗಿದೆ.

ಎಂಟ್ರಿ ಕೊಟ್ಟಿದ್ದು ಯಾಕೆ?: ನಮ್ಮ ಕಾರ್ಯವೈಖರಿ ಪಾರದರ್ಶಕತೆ ಹೆಚ್ಚುತ್ತದೆ. ಜೊತೆಗೆ ಹಲವು ಪ್ರಕರಣಕ್ಕೆ ಸಾರ್ವಜನಿಕರ ಸಹಕಾರವೂ ಲಭ್ಯವಾಗುತ್ತದೆ. ಸಿಐಡಿ ಘಟಕದ ಸ್ಥಾನಮಾನ ಮತ್ತು ಅಧಿಕಾರಿಗಳು ನಡೆಸುತ್ತಿರುವ ತನಿಖೆ ಬಗ್ಗೆ ವಿವರವನ್ನು ಆಗ್ಗಿಂದಾಗ್ಗೆ ಹಂಚಿಕೊಳ್ಳುವುದು ಇದರಿಂದ ಸಾಧ್ಯವಾಗಲಿದೆ ಎಂದು ಪೊಲೀಸ್ ಮಹಾನಿರ್ದೇಶಕ(ಸಿಐಡಿ) ಡಾ.ಡಿ.ವಿ.ಗುರುಪ್ರಸಾದ್ ಹೇಳುತ್ತಾರೆ.

ಸಿಐಡಿಯ ಫೇಸ್ ಬುಕ್ ಐಡಿ 'helpcidkarnataka' ಅಥವಾ D Guruprasad ಫಾಲೋ ಮಾಡಬಹುದು. ಹಾಗೆಯೇ ಟ್ವಿಟ್ಟರ್.ಕಾಂನಲ್ಲಿ @DGPCIDKARNATAKA ಹಿಂಬಾಲಿಸಬಹುದು.

ಏನು ಪ್ರಯೋಜನ?: ಸಾರ್ವಜನಿಕರು ಮಾದಕವಸ್ತು ಸಾಗಣೆ, ಅಕ್ರಮ ಆಯುಧಗಳ ಬಳಕೆ, ಮಾನವ ಕಳ್ಳಸಾಗಣೆ, ಅರಣ್ಯಕ್ಕೆ ಸಂಬಂಧಿಸಿದ ಅಪರಾಧ, ವಂಚನೆ, ಸೈಬರ್ ಕ್ರೈಂಗೆ ಸಂಬಂಧಿಸಿದ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ತ್ವರಿತವಾಗಿ ಒದಗಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X