ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಜೀರಿಯಾ ಪಂದ್ಯ ಗಲಭೆ ಆತಂಕಬೇಡ: ಫೀಫಾ

By Mahesh
|
Google Oneindia Kannada News

FIFA WC 2010
ಜೋಹಾನ್ಸ್ ಬರ್ಗ್ , ಜೂ.8: ನೈಜೀರಿಯಾ ಮತ್ತು ಉತ್ತರ ಕೊರಿಯಾ ತಂಡಗಳ ನಡುವಣ ಅಭ್ಯಾಸ ಪಂದ್ಯದ ವೇಳೆ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಪೊಲೀಸರು ಸೇರಿದಂತೆ 15 ಮಂದಿ ಗಾಯಗೊಂಡ ಘಟನೆ ನಡೆದಿದೆ.

ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ. ಆದರೆ ಪಂದ್ಯಾವಳಿಗೂ, ಕಾಲ್ತುಳಿತ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಫೀಫಾ ಸ್ಪಷ್ಟಪಡಿಸಿದೆ.

ವಿಡಿಯೋಗಳು:

* ಫೀಫಾ ವಿಶ್ವಕಪ್ ಫುಟ್ಬಾಲ್ 2010 ಆಶಯ ಗೀತೆ
* ಫುಟ್ಬಾಲ್ ಗಾಗಿ ಪಾಪ್ ಗಾಯಕಿ ಶಕೀರಾ ಗೀತೆ

ಜೊಹಾನ್ಸ್‌ಬರ್ಗ್‌ನ ಮಕ್ವುಲಾಂಗ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಪಂದ್ಯದ ವೇಳೆ ಸುಮಾರು 12 ಸಾವಿರ ಪ್ರೇಕ್ಷಕರು ಹಾಜರಿದ್ದರು. ಮೈದಾನದ ಹೊರಗೆ ಸಂಭವಿಸಿದ ನೂಕುನುಗ್ಗಾಟದಲ್ಲಿ 14 ಮಂದಿ ಸ್ಥಳೀಯರು ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರು ಮಾತ್ರ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಗುಜೆನ್ ಒಪ್ಪರ್‌ಮನ್ ತಿಳಿಸಿದರು.

ಫೀಫಾ ವಿಶ್ವಕಪ್ ವೇಳಾಪಟ್ಟಿ(ಗುಂಪುಗಳಿಗನುಗುಣವಾಗಿ)
ಫೀಫಾ ವಿಶ್ವಕಪ್ ತಂಡಗಳ ಸ್ಥಾನಮಾನ(ಲೀಗ್ ಹಂತ)
ಫೀಫಾ ವಿಶ್ವಕಪ್ ತಂಡಗಳ ಅಂಕಪಟ್ಟಿ

ಸುಮಾರು 8 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ಹಂಚಿದ್ದರಿಂದ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದರು. ಅದೇ ಸಂದರ್ಭದಲ್ಲಿ ದಿಢೀರನೆ ಗೇಟ್ ಪೂರ್ಣ ತೆಗೆದಿದ್ದರಿಂದ ಗೊಂದಲ ಉಂಟಾಗಿ ದುರ್ಘಟನೆ ಸಂಭವಿಸಿತು. ಗಾಯಗೊಂಡವರಲ್ಲಿ ನೈಜೀರಿಯಾದ ಜೆರ್ಸಿ ತೊಟ್ಟವರು ಅಧಿಕವಾಗಿದ್ದರು ಎಂದು ಅವರು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X