ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ ವಿಶ್ವಕಪ್ : ಸ್ಪೇನ್ ಹಾಟ್ ಫೇವರಿಟ್

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್ , ಜೂ. 8: ಫೀಫಾ ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬುದರ ಬಗ್ಗೆ ಮಾಧ್ಯಮಗಳು, ಬುಕ್ಕಿಗಳು , ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ರಾಯಟರ್ಸ್ ಸಂಸ್ಥೆ ಕೂಡ ಈ ಬಗ್ಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಹೆಚ್ಚಿನ ಮಂದಿ ಸ್ಪೇನ್ ಕಪ್ ಗೆಲ್ಲುವ ಫೇವರೀಟ್ ಎಂದಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 74 ಆರ್ಥಿಕ ತಜ್ಞ ಫುಟ್ಬಾಲ್ ಅಭಿಮಾನಿಗಳ ಪೈಕಿ 24 ಮಂದಿ ಸ್ಪೇನ್ ಪರ ಒಲವು ತೋರಿದ್ದಾರೆ. 23 ಜನ ಬ್ರೆಜಿಲ್ ಗೆ ಮತ ಹಾಕಿದ್ದಾರೆ. ಈ ಬಾರಿ ಅರ್ಜೆಂಟೀನಾಗೆ ಅಭಿಮಾನಿಗಳು ಮೂರನೇ ಸ್ಥಾನ ನೀಡಿದ್ದಾರೆ. ಆದರೆ, ಕಳೆದ ಬಾರಿ ಕಡಿಮೆ ಮತ ಪಡೆದಿದ್ದ ಇಟಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಬ್ರೆಜಿಲ್ ಇದ್ದರೆ, ಸ್ಪೇನ್ ಎರಡನೇ ಸ್ಥಾನದಲ್ಲಿದೆ. ವಿಶ್ವಕಪ್ ಆತಿಥ್ಯದಿಂದ ಏನು ಲಾಭ ಎಂಬ ಪ್ರಶ್ನೆಗೆ ಸ್ಥಳೀಯ ಆರ್ಥಿಕ ತಜ್ಞರು ಮತ್ತು ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ದೇಶದ ಆರ್ಥಿಕತೆ ಉತ್ತಮಗೊಳ್ಳಬಹುದು ಎಂದಷ್ಟೇ ಹೇಳಿದ್ದಾರೆ. ಆದರೆ, ಫೀಫಾ ವಿಶ್ವಕಪ್ ಇತಿಹಾಸ ಅವಲೋಕಿಸಿದರೆ ಆತಿಥೇಯ ತಂಡ ಟೂರ್ನಿಮೆಂಟ್ ನಲ್ಲಿ ಉತ್ತಮ ಸಾಧನೆ ಮೆರೆದಿವೆ. ಈವರೆಗಿನ ಕಪ್ ವಿಜೇತ ತಂಡಗಳಲ್ಲಿ ಅತಿಥೇಯ ತಂಡ ಕಪ್ ಗೆದ್ದ ಸಾಧನೆ ಕೂಡಾ ಮಾಡಿವೆ.

ಅಫ್ರಿಕಾದ ತಂಡಗಳಿಂದ ಅಚ್ಚರಿ ಸಾಧ್ಯತೆ : ಅಭಿಮಾನಿಗಳ ವಿಷಯಕ್ಕೆ ಬಂದರೆ ಸ್ಪೇನ್ ಮತ್ತೆ ಮೊದಲ ಸ್ಥಾನ ಪಡೆದರೆ, ಬ್ರೆಜಿಲ್ ನಂತರದ ಸ್ಥಾನಗಿಟ್ಟಿಸಿಕೊಂಡಿದೆ. ಅರ್ಜೆಂಟೀನಾ, ಇಂಗ್ಲೆಂಡ್ ಅಭಿಮಾನಗಳ ಬಗ್ಗೆ ಎಚ್ಚರ ಎಂಬ ಅಭಿಪ್ರಾಯ ಕೂಡಾ ವ್ಯಕ್ತವಾಗಿದೆ.

ದಕ್ಷಿಣ ಆಫ್ರಿಕಾ ಕ್ವಾಟರ್ ಫೈನಲ್ ಹಂತ ತಲುಪುವುದು ಗ್ಯಾರಂಟಿ. ನೈಜೀರಿಯಾ ಹಾಗೂ ಕೆಮರೂನ್ ಯಾವುದೇ ತಂಡವನ್ನು ಮಣಿಸುವ ಸಾರ್ಮರ್ಥ್ಯ ಹೊಂದಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

English summary
Spain are favourites to be crowned World Cup champions, narrowly ahead of Brazil, according to a global field of 74 soccer fan economists polled by Reuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X