ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಗೆ ಪುಂಡ ಅಭಿಮಾನಿಗಳ ತಲೆನೋವು

By Mahesh
|
Google Oneindia Kannada News

FIFA WC 2010 Hooligans
ಜೋಹಾನ್ಸ್ ಬರ್ಗ್, ಜೂ.8: ಬ್ರಿಟನ್ನಿನ ಬ್ಯಾಡ್ ಬಾಯ್ಸ್ ಹರಿಣಗಳ ನಾಡಿನಲ್ಲಿ ಬಾಯ್ಬಿಡುವ ಮುಂಚೆಯೇ ಅರ್ಜೆಂಟೀನಾದಿಂದ ಬಂದಿದ್ದ ತಂಟೆಕೋರ ಫುಟ್ಬಾಲ್ ಅಭಿಮಾನಿಗಳನ್ನು ದಕ್ಷಿಣ ಆಫ್ರಿಕಾ ಪೊಲೀಸರು ಬಂಧಿಸಿ, ಹಿಂದಕ್ಕೆ ಓಡಿಸಿದ್ದಾರೆ.

ಅಂಗೋಲ ಕಡೆಯಿಂದ ಬಂದಿದ್ದ ಪುಂಡರ ಗ್ಯಾಂಗ್ ನಲ್ಲಿ ಕೊಲೆ ಕೇಸಿನ ಆರೋಪಿ ಸೇರಿದಂತೆ ಅರ್ಜೆಂಟೀನಾ ಮೂಲದ ಹತ್ತು ಜನರಿದ್ದರು. ಆವರೆಲ್ಲ ಸಾರ್ವಜನಿಕರಲ್ಲಿ ಕಿಚ್ಚೆಬ್ಬಿಸಿ ಗುಂಪು ಘರ್ಷಣೆ ಹುಟ್ಟು ಹಾಕಲು ಬಂದಿದ್ದರು. ಅರ್ಜೆಂಟೀನಾದ ಎದುರಾಳಿ ತಂಡಗಳ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಫೀಫಾ ವಿಶ್ವಕಪ್ 2010 :
ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ

ಪುಂಡರ ನಿಗ್ರಹಕ್ಕೆ ಯೋಜನೆ : ಬ್ರಿಟನ್, ಅರ್ಜೆಂಟೀನಾ ಪುಂಡ ಅಭಿಮಾನಿಗಳ ಮೇಲೆ ನಿಗಾ ಇಡಲು ವಿಶೇಷ ತಂಡ ರಚನೆಯಾಗಿದೆ. ಈಗಾಗಲೇ ಪುಂಡರಿಗೆ ವೀಸಾ ನೀಡದಂತೆ ಆಫ್ರಿಕಾ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿದೆ. ಬ್ರಿಟನ್ ಅಭಿಮಾನಿಗಳು ತಂಗುವ ತಾಣದಿಂದ ದೂರ ಉಳಿಯುವಂತೆ ಇತರೆಲ್ಲ ರಾಷ್ಟ್ರಗಳಿಗೂ ಎಚ್ಚರಿಕೆ ರವಾನಿಸಲಾಗಿದೆ.

ವಿಡಿಯೋಗಳು :
ಅಧಿಕೃತ ವಿಶ್ವಕಪ್ ಆಶಯ ಗೀತೆ || ಪಾಪ್ ಗಾಯಕಿ ಶಕೀರಾ ಗೀತೆ

ಆಂಗ್ಲ ಪುಂಡರು ಅರ್ಜಂಟೀನಾ ಅಭಿಮಾನಿಗಳಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ ರವಾನಿಸಿದ್ದಾರೆ. ಅತ್ತ ಸವಾಲು ಸ್ವೀಕರಿಸಿರುವ ಅರ್ಜೆಂಟೀನಾ ಪಡ್ಡೆಗಳು ಒಂದು ಕೈ ನೋಡೇ ಬಿಡುವ ಶಪಥ ಮಾಡಿದ್ದಾರೆ. ಸಂಭಾವ್ಯ ದಾಂಧಲೆಯ ಸುಳಿವು ಟೂರ್ನಿ ಆರಂಭಕ್ಕೂ ಮೊದಲೇ ಹೊರಬಿದ್ದಿರುವುದರಿಂದ ಫೀಫಾ ವಿಶ್ವಕಪ್ 2010ಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಧಂಗೆಕೋರರು, ಕಳ್ಳರು, ಮಾನವ ಸಾಗಾಣಿಕೆ, ಡ್ರಗ್ ಮಾಫಿಯಾ ದಕ್ಷಿಣ ಆಫ್ರಿಕಾ ನೆಲಕ್ಕೆ ಕಾಲಿಡದಂತೆ ಎಚ್ಚರಿಕೆ ವಹಿಸಲಾಗಿದೆ. ಫುಟ್ಬಾಲ್ ಕ್ರೀಡಾಂಗಣದಲ್ಲಿ ಚೂರಿ, ಚಾಕು, ಸೇರಿದಂತೆ ಎಲ್ಲ ಬಗೆಯ ವಸ್ತುಗಳ ಪ್ರವೇಶವೀಗ ನಿಷೇಧ. ಸ್ಟೇಡಿಯಂ ಸುತ್ತ ವಿಶೇಷ ಭದ್ರತಾ ಸಿಬ್ಬಂದಿ ನಿಯೋಜನೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X