ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನೂ ಬೇಡವಾದ, ಪ್ರಿಯತಮನೂ ಕೈಕೊಟ್ಟ

By Prasad
|
Google Oneindia Kannada News

Divorced Bangalore girl ditched by boy friend
ಬೆಂಗಳೂರು, ಜೂ. 8 : ಬ್ಲಾಕ್ ಬಸ್ಟರ್ ಕನ್ನಡ ಸಿನೆಮಾ ಮಾಡೋದಕ್ಕೆ ವಿಫಲವಾದ ಪ್ರೇಮದ ಪರ್ಫೆಕ್ಟ್ ಕಥೆ ಇಲ್ಲಿದೆ. ಪ್ರಿಯತಮ ತನ್ನನ್ನು ಮದುವೆಯಾಗುತ್ತಾನೆಂಬ ನಂಬಿಕೆಯಿಂದ ಗಂಡನಿಗೆ ವಿಚ್ಛೇದನ ನೀಡಿ ಪ್ರಿಯತಮನಿಂದಲೂ ತಿರಸ್ಕೃತಳಾದ ಪ್ರಿಯತಮೆಯ ದುರಂತ ಕಥೆಯಿದು.

ವೈಟ್ ಫೀಲ್ಡ್ ಐಟಿ ಪಾರ್ಕ್ ನಲ್ಲಿರುವ ಖ್ಯಾತ ಐಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಕೆಲಸದಲ್ಲಿದ್ದ 32 ವರ್ಷದ ಕೀರ್ತಿ ಮದುವೆಯಾಗಿದ್ದರೂ ಸಹೋದ್ಯೋಗಿ ರಂಗರಾಜನ್ ಎಂಬ ಧೂರ್ತನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ತನ್ನ ಗಂಡನಿಗೆ ವಿಚ್ಛೇದನ ನೀಡಿದರೆ ಮದುವೆಯಾಗುವುದಾಗಿ ರಂಗರಾಜನ್ ಆಕೆಗೆ ಭಾಷೆಯಿತ್ತಿದ್ದ.

ಬೆಕ್ಕು ಕಣ್ಣು ಮುಚ್ಚಿಕೊಂಡಿಕೊಂಡು ಹಾಲು ಕುಡಿಯುತ್ತಿದ್ದರೂ ಗೊತ್ತಾಗದ ಕೀರ್ತಿ ರಂಗರಾಜನ್ ಬೀಸಿದ ಬಲೆಯಲ್ಲಿ ಬಿದ್ದಿದ್ದಾಳೆ. ವಿಚ್ಛೇದನ ಅರ್ಜಿ ಸಲ್ಲಿಸಿದ ಕೀರ್ತಿ ಬಸವನಗುಡಿಯಲ್ಲಿದ್ದ ರಂಗರಾಜನ್ ಜೊತೆ ಲೀವ್-ಇನ್-ಸಂಬಂಧ ಶುರುಮಾಡಿದ್ದಾಳೆ. ಕೆಲ ತಿಂಗಳ 'ಸುಖ ಸಂಸಾರ' ನಡೆಸಿದ ಕೀರ್ತಿಗೆ ರಂಗರಾಜನ್ ತನ್ನನ್ನು ಬಳಸಿಕೊಳ್ಳುತ್ತಿದ್ದಾನೆ ಮತ್ತು ತನ್ನನ್ನು ಮದುವೆಯಾಗುವ ಯಾವ ಉದ್ದೇಶವೂ ಆತನಿಗಿಲ್ಲ ಎಂಬುದು ಮನವರಿಕೆಯಾಗಿದೆ.

ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ಇವಳನ್ನು ಮದುವೆಯಾಗುವುದಾಗಿ ನಂಬಿಸಿದ್ದ ರಂಗರಾಜನ್ ಮತ್ತೊಬ್ಬಳನ್ನು ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಲು ತೆರೆಮರೆಯ ಸಿದ್ಧತೆ ನಡೆಸಿದ್ದ. ಮಿಂಚಿ ಹೋದ ಮಾತಿಗೆ ಚಿಂತಿಸಲು ಪ್ರಾರಂಭಿಸಿದ ಕೀರ್ತಿ ಮತ್ತು ರಂಗರಾಜನ್ ನಡುವೆ ವಾಗ್ಯುದ್ಧ ನಡೆದಿದೆ. ಇದನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ರಂಗರಾಜನ್ ಗೂಂಡಾಗಳನ್ನು ಬಳಸಿ ಕೀರ್ತಿಯನ್ನು ಬೆದರಿಸಿದ್ದಾನೆ. ಆಕೆ ಬಗ್ಗದಿದ್ದಾಗ ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾನೆ. ಹೇಗೋ ಪಾರಾದ ಕೀರ್ತಿ ಪೊಲೀಸರಿಗೆ ಆತನ ವಿರುದ್ಧ ದೂರು ನೀಡಿದ್ದಾಳೆ.

ಎಚ್ಎಸ್ಆರ್ ಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡು ರಂಗರಾಜನ್ ನನ್ನು ಕರೆದು ಬುದ್ಧಿ ಹೇಳಿ ಆತನ ಮನವೊಲಿಸಲು ಯತ್ನಿಸಿದ್ದಾರೆ. ತನ್ನನ್ನು ತಾನು ತಿದ್ದಿಕೊಂಡು ಕೀರ್ತಿಯನ್ನು ಮದುವೆಯಾಗಲು ಒತ್ತಾಯಿಸಿದ್ದಾರೆ. ಆತ ದಾರಿಗೆ ಬರದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಕೀರ್ತಿಗೆ ವಾಗ್ದಾನ ನೀಡಿದ್ದಾರೆ.

ಈ ಘಟನೆ ಕುರಿತಂತೆ ಕೆಲ ಪ್ರಶ್ನೆಗಳು :

* ಕೀರ್ತಿ ವಿಚ್ಛೇದನ ಅರ್ಜಿ ಹಿಂದೆ ಪಡೆದು ಹಳೆ ಗಂಡನ ಪಾದವನ್ನು ಹಿಡಿದುಕೊಳ್ಳಬೇಕೆ?
* ವಂಚಿಸಿದ ಪ್ರಿಯಕರನನ್ನು ಪ್ರಿಯತಮೆ ಮದುವೆಯಾಗಬೇಕೆ?
* ಇಬ್ಬರನ್ನೂ ಬಿಟ್ಟು ಕೀರ್ತಿ ಹೊಸ ಜೀವನ ನಡೆಸಬೇಕೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X