ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್ ಅನಿಲ ದುರಂತ ಇಷ್ಟು ಶಿಕ್ಷೆ ಸಾಕೇ?

By Mahesh
|
Google Oneindia Kannada News

Bhopal Gas teagedy verdict is out
ಭೋಪಾಲ್ , ಜೂ.7: ಭೋಪಾಲ್ ಅನಿಲ ಸೋರಿಕೆ ದುರಂತ ಸಂಭವಿಸಿ 25ಕ್ಕೂ ಅಧಿಕ ವರ್ಷಗಳ ನಂತರ ದುರಂತಕ್ಕೆ ಕಾರಣರಾದ ಎಂಟು ಜನ ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಅಪರಾಧಿಗಳೆಂದು ಪ್ರಕಟಿಸಿದೆ. ಪ್ರಮುಖ ಆರೋಪಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ನ ಮಾಜಿ ಮುಖ್ಯಸ್ಥ ವಾರೆನ್ ಆಂಡರ್ಸನ್, ನಾಪತ್ತೆಯಾಗಿದ್ದಾನೆ. ಶಿಕ್ಷೆ ಪ್ರಮಾಣ ಇನ್ನೂ ಪ್ರಕಟಗೊಳ್ಳಬೇಕಿದ್ದು, ಹೆಚ್ಚೆಂದರೆ ಆರೋಪಿಗಳಿಗೆ 2 ರಿಂದ 3 ವರ್ಷಗಳ ಜೈಲುವಾಸವಾಗಬಹುದು.

ಆರೋಪಿಗಳಾದ ಕೇಶುಭ್ ಮಹೇಂದ್ರ, ಜೆ ಮುಕುಂದ್, ಎಸ್ ಪಿ ಚೌಧುರಿ, ಕೆವಿ ಶೆಟ್ಟಿ, ಎಸ್ ಐ ಖುರೇಷಿ, ವಿಜಯ್ ಗೋಖಲೆ, ಕಿಶೋರ್ ಕಂಬದಾರ್ ಯೂನಿಯನ್ ಕಾರ್ಬೈಡ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಇವರ ಮೇಲೆ ಸೆಕ್ಷನ್ 304(ಎ) , 336 ಹಾಗೂ 337 ಭಾರತೀಯ ದಂಡ ಸಂಹಿತೆ ಪ್ರಕಾರ ಆರೋಪ ಹೊರೆಸಲಾಗಿತ್ತು.

ಎರಡು ದಶಕಗಳಿಗೂ ಅಧಿಕ ಕಾಲ ನಡೆದ ವಿಚಾರಣೆಯಲ್ಲಿ ಸುಮಾರು 178 ಜನ ಸಾಕ್ಷಿಗಳಾಗಿ ಕೋರ್ಟ್ ಗೆ ಹಾಜರಾಗಿದ್ದರು. ಯೂನಿಯನ್ ಕಾರ್ಬೈಡ್ ಮಾಜಿ ಮುಖ್ಯಸ್ಥ ವಾರೆನ್ ಅಂಡರ್ಸನ್ ವಿರುದ್ಧ 2009 ರಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಆದರೆ, ಸಿಬಿಐ ಕೈಗೆ ಸಿಕ್ಕಿಲ್ಲ. ಅಲ್ಲದೆ, ಯೂನಿಯನ್ ಕಾರ್ಬೈಡ್ ನ ಅಮೆರಿಕ ಹಾಗೂ ಪೂರ್ವ ಹಾಂಗ್ ಕಾಂಗ್ ನ ಶಾಖೆಗಳಿಂದ ಯಾವುದೇ ಆರೋಪಿತ ಅಧಿಕಾರಿಗಳು ಭಾರತದ ಕೋರ್ಟ್ ಮೆಟ್ಟಿಲು ಹತ್ತಿಲ್ಲ.

1984 ಡಿಸೆಂಬರ್ 3 ಭಾರತ ಇತಿಹಾಸದ ಕರಾಳ ದಿನ. ಭೋಪಾಲ್ ನಲ್ಲಿರುವ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ 40 ಟನ್ ಗೂ ಹೆಚ್ಚು ಅತ್ಯಂತ ವಿಷಕಾರಕ ಮಿಥೈಲ್ ಐಸೋಸೈನೆಟ್ ಅನಿಲ ಸೋರಿಕೆಯಾಗಿ ಸುಮಾರು 8 ರಿಂದ 10 ಸಾವಿರ ಮಂದಿ ಸಾವಿಗೀಡಾದರು. ಈ ದುರಂತದಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿಯ ವಿವಿಧ ಅಂಗವೈಕಲ್ಯಕ್ಕೂ ಕಾರಣವಾಯಿತು. ಡಿ. 3 ರಂದು ಭೋಪಾಲ್ ಅನಿಲ ಸೋರಿಕೆ ದಿನವನ್ನಾಗಿ ಆಚರಿಸಲಾಗತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X