ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಂಚ್ ಓಪನ್ ಡಬಲ್ಸ್ ಪೇಸ್ ಗೆ ನಿರಾಸೆ

By Mahesh
|
Google Oneindia Kannada News

Leander Paes
ಪ್ಯಾರೀಸ್, ಜೂ.6: ಭಾರತದ ಲಿಯಾಂಡರ್ ಪೇಸ್ ಹಾಗೂ ಲುಕಾಸ್ ಡ್ಲೋಹಿ ಜೋಡಿ ಶನಿವಾರ ನಡೆದ ಫೈನಲ್‌ನಲ್ಲಿ ಅವರು ಡೇನಿಯಲ್ ನೆಸ್ಟರ್ ಮತ್ತು ನೆನಾದ್ ಜಿಮೋಂಜಿಕ್ ಅವರೆದುರು ನೇರ ಸೆಟ್‌ಗಳಿಂದ ಸೋಲುಂಡಿದೆ. ಸತತ ಎರಡನೇ ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಪೇಸ್ ಜೋಡಿಗೆ ನಿರಾಸೆಯಾಗಿದೆ.

ಇಲ್ಲಿನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ 65 ನಿಮಿಷಗಳ ಹೋರಾಟದಲ್ಲಿ ಕೆನಡಾ-ಸೆರ್ಬಿಯಾ ಜೋಡಿ ಭಾರತ-ಜೆಕ್ ಜತೆಗಾರರನ್ನು 7-5, 6-2ರಿಂದ ಸೋಲಿಸುವುದರೊಂದಿಗೆ ಹಾಲಿ ಚಾಂಪಿಯನ್‌ಗಳಿಗೆ ನಿರಾಸೆ ಒದಗಿಸಿದರು.

ಸತತ ಎರಡನೇ ಬಾರಿಯೂ ಫೈನಲ್ ಪ್ರವೇಶಿಸಲು ಸಾಧ್ಯವಾಗಿರುವುದು ಆನಂದ ತಂದಿದೆ. ಹಾಗಾಗಲು ಸಹಕರಿಸಿದ ಮತ್ತು ನನ್ನೊಂದಿಗೆ ಉಳಿದುಕೊಂಡ ಡ್ಲೋಹಿಯವರಿಗೆ ಧನ್ಯವಾದಗಳು ಎಂದರು. 1999 ಮತ್ತು 2001ರಲ್ಲಿ ಮಹೇಶ್ ಭೂಪತಿಯವರೊಂದಿಗೆ ಇಲ್ಲಿ ಪ್ರಶಸ್ತಿ ಗೆದ್ದಿದ್ದನ್ನು ಪೇಸ್ ಸ್ಮರಿಸಿದರು.

ಇಟಲಿ ಮಹಿಳೆಗೆ ಗ್ರಾಂಡ್ ಸ್ಲಾಮ್ ಗೌರವ: ಮೊತ್ತ ಮೊದಲ ಬಾರಿಗೆ ಇಟಲಿಯ ಆಟಗಾರ್ತಿ ಮಹಿಳೆಯೊಬ್ಬರು ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಐತಿಹಾಸಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ಶನಿವಾರ ಫ್ರೆಂಚ್ ಓಪನ್ ಪ್ರಶಸ್ತಿಗಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟೋಸರ್ 6-4, 7-6 (7/2)ರ ಅಂತರದಿಂದ ಮಣಿಸಿದ ಇಟಲಿಯ ಫ್ರಾನ್ಸಿಸ್ಕಾ ಶಿಯಾವೋನ್ ಮೊದಲ ಬಾರಿಗೆ ಮಹಿಳೆಯರ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X