ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಲೇಖಾ ಕೇಸ್: ಅರುಂಧತಿ ನಾಗ್ ವಿಷಾದ

By Mahesh
|
Google Oneindia Kannada News

Arundati Nag
ಬೆಂಗಳೂರು, ಜೂ.6: ಅಡ್ವೋಕೇಟ್ ಚಿತ್ರಲೇಖಾ ಕೊಲೆ ಪ್ರಕರಣದ ತೀರ್ಪು ಆಕೆಯ ಬಾಲ್ಯದ ಒಡನಾಡಿ ,ನಟಿ ಅರುಂಧತಿ ನಾಗ್ ಅವರಿಗೆ ತೀವ್ರ ಆಘಾತ ಉಂಟುಮಾಡಿದೆ. ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಈ ಪ್ರಕರಣವನ್ನು ಪುನಃ ವಿಚಾರಣೆಗೊಳಪಡಿಸಬೇಕು ಚಿತ್ರಲೇಖಾ ನನಗೆ ತುಂಬ ಚಿಕ್ಕವಳಿದ್ದಾಗಿನಿಂದ ಗೊತ್ತು ಎಂದರು.

ಅವಳ ಮನೆಗೆ ನಾನು ಶಂಕರ್‌ನಾಗ್ ಹೋಗಿಬರುತ್ತಿದ್ದೆವು. ಆ ದಿನ ಅವಳು ಕಾಣೆಯಾದ ಸುದ್ದಿ ಕೇಳಿ ದಿಕ್ಕು ತೋಚದಂತಾಗಿತ್ತು. ನಂತರ ಸಕಲೇಶಪುರ ಘಾಟ್‌ನಲ್ಲಿ ಅವಳ ಶವ ಸಿಕ್ಕಿದಾಗ ದಿಗ್ಭ್ರಮೆಗೊಂಡಿದ್ದೆ ಎಂದು ನೆನಪಿಸಿಕೊಂಡರು. ಈಗ ತೀರ್ಪು ಗಮನಿಸಿದ ಮೇಲೆ ನ್ಯಾಯ ಎಲ್ಲಿದೆ ಎನ್ನುವಂತಾಗಿದೆ. ಈ ಕೇಸ್ ಪುನಃ ವಿಚಾರಣೆಯಾಗಬೇಕು.

ಇದನ್ನು ಹೀಗೆ ಬಿಟ್ಟರೆ ಮುಂದೆ ರಾಜ್ಯದಲ್ಲಿ ಇಂಥಹ ಪ್ರಕರಣಗಳು ಹೆಚ್ಚಾಗುತ್ತವೆ. ಈ ರೀತಿ ಅರುಂಧತಿ ನಾಗ್ ಮನದ ಮೂಲೆಯಲ್ಲಿದ್ದ ಸಂಕಟವನ್ನು ಹೊರ ಹಾಕಿದರು.ನಾನು ಈ ರಾಜ್ಯದ ಜನ ಸಾಮಾನ್ಯರಲ್ಲಿ ಒಬ್ಬಳಾಗಿ ಈ ರೀತಿ ಕೇಳುತ್ತಿದ್ದೇನೆ ಎಂದರು ಅರುಂಧತಿ ನಾಗ್.

ಜಸ್ಟೀಸ್ ಸಾಲ್ಡಾನಾ ಖೇದ: ಚಿತ್ರಲೇಖಾ ಕೊಲೆ ಕುರಿತ ಪರಿಸ್ಥಿತಿಯ ಸಂದರ್ಭದಲ್ಲಿದ್ದ ಸಾಕ್ಷ್ಯಗಳನ್ನು ಪರಿಗಣಿಸದೆ ಭಾರತಿ ಅರಸ್ ಅವರನ್ನು ಬಿಡುಗಡೆ ಮಾಡಿರುವ ಕೆಳ ಹಂತದ ನ್ಯಾಯಾಲಯದ ಧೋರಣೆಗೆ ಜಸ್ಟೀಸ್ ಸಾಲ್ಡಾನಾ ಖೇದ ವ್ಯಕ್ತಪಡಿಸಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ನೇರವಾಗಿ ಸಾಕ್ಷ್ಯಗಳು ದೊರಕದಿದ್ದರೂ ಆ ಸಂದರ್ಭದಲ್ಲಿ ಸಾಲಕ್ಕೆ ಸಂಬಂಧಿಸಿದಂತೆ ಅವರ ನಡುವೆ ನಡೆದಿರುವ ಮಾತುಕತೆ ಹಾಗೂ ಇನ್ನಿತರ ನಡವಳಿಕೆಗಳು ಸಾಕ್ಷ್ಯವಾಗಿ ನಿಲ್ಲುತ್ತವೆ. ಕೊಲೆಗೆ ಪೂರಕವಾಗಿ ಸಾಕಷ್ಟು ಪುರಾವೆಗಳಿವೆ ಎಂದರು. ಈ ರೀತಿಯ ತೀರ್ಪಿನಿಂದ ಜನರು ನ್ಯಾಯಾಲಯದ ಬಗೆಗಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಸಾಲ್ಡಾನಾ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X