ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಗಳಿರಾ ಅಕ್ಕಗಳಿರಾ ಇರುವುದೊಂದೇ ಭೂಮಿ

By *ಉದಯರವಿ
|
Google Oneindia Kannada News

world environment day, June 5
ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗುತ್ತಿವೆ. ಉರಿ ಬಿಸಿಲು ಮನುಷ್ಯನ ನೆತ್ತಿ ಸುಡುತ್ತಿದೆ. ಆನೆಗಳು ಹೊಲ ಗದ್ದೆಗಳಿಗೆ ನುಗ್ಗುತ್ತಿವೆ. ಕರಡಿಗಳು ಹಳ್ಳಿಗಳ ಮೇಲೆ ದಾಳಿ ಮಾಡುತ್ತಿವೆ. ಹೊಸ ಹೊಸ ರೋಗರುಜಿನಗಳು ಜೀವ ಹಿಂಡುತ್ತಿವೆ. ಋತುಗಳು ಕಾಲತಪ್ಪುತ್ತಿವೆ. ಭೂಗೋಳ ಬಿಸಿಯೇರುತ್ತಿದೆ. ಹೀಗೇಕೆ? ಇದಕ್ಕೆ ಕಾರಣ ಯಾರು? ಪ್ರಶ್ನೆಗಳೆಷ್ಟಿದ್ದರೂ ಉತ್ತರ ಒಂದೇ....ನಾವೇ! ಜೂ.5 ವಿಶ್ವ ಪರಿಸರ ದಿನಾಚರಣೆ.

ಪರಿಸರ ಅಂದ್ರೆ ನಮ್ಮ ಸುತ್ತಲೂ ಇರುವ ವಾತಾವರಣ. ಗಿಡ, ಪ್ರಾಣಿ, ಮನುಷ್ಯರು, ಕ್ರಿಮಿ ಕೀಟಗಳು, ಗಾಳಿ, ನೀರು , ಭೂಮಿ...ಹೀಗೆ! ಪರಿಸರ ಪ್ರಕೃತಿಯಲ್ಲಿನ ಚರಾಚರ ಜೀವಿಗಳನ್ನು ಅದ್ಭುತವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ . ಗಿಡಕ್ಕೊಂದು ಪರಿಸರ ವ್ಯವಸ್ಥೆಯಿರುತ್ತದೆ. ಮನುಷ್ಯನಿಗೊಂದು ಪರಿಸರವಿರುತ್ತದೆ. ಹಾಗೆಯೇ ಉಳಿದ ಜೀವಜಾಲಕ್ಕೆ, ಅದರ ವ್ಯಾಪ್ತಿಯಲ್ಲಿ ಅದು ಬದುಕುತ್ತದೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಒಂದರ ಮೇಲೆ ಮತ್ತೊಂದು ಆಧಾರ ಪಟ್ಟಿವೆ. ಒಂದು ವ್ಯವಸ್ಥೆಯಲ್ಲಿ ವ್ಯತ್ಯಾಸವಾದರೂ ಅದರ ಪರಿಣಾಮ ಉಳಿದ ಎಲ್ಲ ವ್ಯವಸ್ಥೆಗಳ ಮೇಲೂ ಆಗುತ್ತದೆ.

ಈ ಮನುಷ್ಯ ಎಂಬ ಪ್ರಾಣಿ ಪರಮ ನೀಚ ಕೃತ್ಯಗಳನ್ನು ಮಾಡಿದ್ದಾನೆ. ಮಹಾಸ್ವಾರ್ಥಿ. ಯಾವುದು ಏನಾದರೂ ಸರಿ ತಾನು ಚೆನ್ನಾಗಿದ್ದರೆ ಸಾಕು ಎಂಬ ಮನೋಭಾವ. ತನ್ನ ಹೊಟ್ಟೆ ತುಂಬಿದರೆ ಸಾಕು, ನಾಲ್ಕು ತಲೆಮಾರಿಗೆ ಸರಿಹೋಗುವಷ್ಟು ಸಂಪಾದಿಸಿದರೆ ಅಷ್ಟೇ ಸಾಕು...ಎನ್ನುವ ಸ್ವಾರ್ಥಿ. ದುಷ್ಟ ಆಲೋಚನೆಯಿಂದ ಯುಗ ಯುಗಗಳ ಸ್ಕ್ಲೀನ್ ಪ್ಲೇಯನ್ನು ಮನಬಂದಂತೆ ಬದಲಾಯಿಸಿದ್ದಾನೆ. ಭೂಮಿಯನ್ನು ಭೂಮಾತೆಯಂತೆ ಕಾಣಲೇ ಇಲ್ಲ. ನದಿಗಳನ್ನು ಮುಕ್ತವಾಗಿ ಹರಿಯಲು ಬಿಡಲಿಲ್ಲ. ಚಿಗುರುವ ಗಿಡಗಳನ್ನು ಆರಂಭದಲ್ಲೆ ಚಿವುಟಿ ಹಾಕಿದ್ದಾನೆ.

ಮನುಷ್ಯ ಪ್ರಕೃತಿಯೊಂದಿಗೆ ಯುದ್ಧಕ್ಕೆ ಇಳಿಯಬಾರದು. ಸಹಜೀವನ ಮಾಡಬೇಕು. ತಾನು ಈ ಭೂಮಿಗೆ ಬಂದಿದ್ದು ದೋಚಿಕೊಂಡು ಹೋಗಲು ಅಲ್ಲ. ಕೆಲ ಕಾಲ ಬದುಕಲು. ತಾನು ಬದುಕುತ್ತಾ ತನ್ನ ಸುತ್ತಲೂ ಇರುವ ಜೀವಜಾಲವನ್ನು ಉಳಿಸಲು. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡರೆ ಸಾಕು. ಯಾವ ಕಾನೂನು ಬೇಕಾಗಿಲ್ಲ.ಮನಸ್ಸಿರುವ ಪ್ರತಿಯೊಬ್ಬರು ಪರಿಸರವನ್ನು ಕಾಪಾಡುವ ಜವಾಬ್ದಾರಿಯಿಂದ ಮುಂದೆ ಬರಬೇಕು.

ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸುವುದನ್ನು ಬಿಟ್ಟು 'ಭೂಮಿಯ ಉಳಿವಿಗಾಗಿ ಪಣತೊಡೋಣ?' ಇರುವುದೊಂದೇ ಭೂಮಿ ಅದರ ಒಳಿತಿಗೆ ಶ್ರಮಿಸೋಣ. ಇಲ್ಲದಿದ್ದರೆ ನಮ್ಮ ಸಾವಿಗೆ ನಾವೇ ಷರಾ ಬರೆದುಕೊಂಡಂತಾಗುತ್ತದೆ. ಬನ್ನಿ ಭೂಮಿಗೀತ ಹಾಡೋಣ.

ನಿಮ್ಮಿಂದ ಈ ಅಳಿಲು ಸೇವೆ ಸಾಧ್ಯವೆ?

*ಪ್ಲಾಸ್ಟಿಕ್ ಗೆ ಬದಲಾಗಿ ಬಟ್ಟೆ ಚೀಲ ಬಳಸಿ
*ಗಿಡ ನೆಡಿ ಗಿಡ ನೆಡಿ ಮನೆಯ ಮುಂದೊಂದು ಗಿಡ ನೆಡಿ
*ನೀರನು ಹಿತಮಿತವಾಗಿ ಬಳಸಿ
*ಸೈಕಲ್ ಬಳಕೆ ಜನಪ್ರಿಯಗೊಳಿಸಿ
* ಟಿಶ್ಯೂ ಪೇಪರ್ ಬಳಕೆಯನ್ನು ಕಡಿಮೆ ಮಾಡಿ
*ಷವರ್ ಬಾತ್ ಗೆ ಇತಿಶ್ರೀ ಹಾಡಿ ಬಕೆಟ್ ನೀರಿಗೆ ಪ್ರಾಮುಖ್ಯತೆ ಕೊಡಿ
*ಭಾರತೀಯ ಪದ್ಧತಿಯ ಶೌಚಾಲಯದಿಂದ ನೀರಿನ ಉಳಿತಾಯ ಸಾಧ್ಯ
*ರೀಚಾರ್ಚ್ ಮಾಡಿಕೊಳ್ಳಲು ಸಾಧ್ಯವಿರುವ ಬ್ಯಾಟರಿಗಳನ್ನೇ ಬಳಸೋಣ
*ಜಲಚರಗಳಿಗೆ ಹಾನಿಯನ್ನುಂಟು ಮಾಡುವ ಶಾಂಪು ಬಳಕೆಯನ್ನು ನಿಲ್ಲಿಸಿ, ಸೀಗೇಕಾಯಿ, ಅಂಟುವಾಳಕಾಯಿ ಬಳಕೆ ಹೆಚ್ಚಿಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X