ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ ಕುಡಿಯುವ ನೀರಿನ ಬಾಟಲಿ ನಿಷೇಧ

By Rajendra
|
Google Oneindia Kannada News

Water bottles banned in Tirumala
ತಿರುಪತಿ, ಜೂ.5: ತಿರುಮಲ ತಿರುಪತಿಯಲ್ಲಿ ಇಂದಿನಿಂದ ಕುಡಿಯುವ ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ. ದ್ರವರೂಪದ ಬಾಂಬ್ ರೂಪದಲ್ಲಿ ತಿರುಮಲ ತಿರುಪತಿಯಲ್ಲಿ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ತಿರುಮಲ ತಿರುಪತಿ ಆಲಯದಲ್ಲಿ ಪೊಲೀಸ್ ಬಿಗಿ ಭದ್ರತೆಯಿದೆ. ಆದರೂ ಡಿಟೆಕ್ಟರ್ ಗಳಿಗೆ ದ್ರಮರೂಪದಲ್ಲಿನ ಸ್ಫೋಟಕಗಳನ್ನು ಗುರಿತಿಸುವ ಸಾಮರ್ಥ್ಯವಿಲ್ಲದ ಕಾರಣ ಈ ಕ್ರಮ ಅನಿವಾರ್ಯವಾಗಿದೆ. ಆಲಯಕ್ಕೆ ಬರುವ ಭಕ್ತರಿಗೆ ಇನ್ನು ಮುಂದೆ ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಸ್ಥಾನದ ಸಿಬ್ಬಂದಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳು ಇನ್ನು ಮುಂದೆ ಬರ್ಮುಡಾ, ಚಡ್ಡಿ ಮತ್ತು ಟೀ ಶರ್ಟ್ ಗಳನ್ನು ಧರಿಸುವಂತಿಲ್ಲ. ಸಭ್ಯ ಉಡುಪುಗಳನ್ನ್ನು ಧರಿಸಿ ಮಾತ್ರ ತಿಮ್ಮಪ್ಪನ ದರ್ಶನ ಪಡೆಯಬೇಕಾಗುತ್ತದೆ. ಈ ಮೂಲಕ ತಿರುಮಲ ತಿರುಪತಿ ಆಲಯ ಮಂಡಳಿ ಈ ನಿರ್ಣಯ ತೆಗೆದುಕೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X