ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ನಲ್ಲಿರುವ ವೀರ್ ಸ್ಮಾರಕ ಭಾರತದಲ್ಲೇಕಿಲ್ಲ?

By Prasad
|
Google Oneindia Kannada News

Veer Savarkar
ಬೆಂಗಳೂರು, ಜೂ. 4 : ನಮ್ಮ ದೇಶದಲ್ಲಿ ಕೆಲ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಮತ್ತು ವೀರಮರಣಹೊಂದಿದ ಸೈನಿಕರ ಬಗ್ಗೆ ಏಕೆ ಅಷ್ಟೊಂದು ನಿರ್ಲಕ್ಷವೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕೆಂದಿರುವ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಅಪ್ರತಿಯ ಹೋರಾಟಗಾರ ವೀರ ಸಾವರಕರ್ ಅವರ ಸ್ಮಾರಕ ನಿರ್ಮಾಣ ಕಳೆದ ಹನ್ನೊಂದು ವರ್ಷಗಳಿಂದ ನೆನೆಗುದಿಯಲ್ಲಿ ಬಿದ್ದಿದೆ.

ಇಂಥ ಸಂದರ್ಭದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರಿಗಿಂತ ಮೊದಲೇ ಸ್ವದೇಶಕ್ಕೆ ಮರಳಿದ ಫ್ರಾನ್ಸ್ ಸರಕಾರ ನಿರ್ಲಕ್ಷಿತ ನಾಯಕ ವೀರ ಸಾವರಕರ್ ಅವರಿಗೆ ಗೌರವ ನೀಡಲು ನಿರ್ಧರಿಸಿದೆ. ಸಾರವಕರ್ ಅವರ ಗೌರವಾರ್ಥವಾಗಿ ತಮ್ಮ ದೇಶದಲ್ಲಿ ಸ್ಮಾರಕ ನಿರ್ಮಿಸಲು ಫ್ರೆಂಚ್ ಸರಕಾರ ಒಪ್ಪಿಗೆ ನೀಡಿದೆ. ಆದರೆ ನಮ್ಮ ಭಾರತ ಸರಕಾರ ವಿನಾಕಾರಣ ಸ್ಮಾರಕ ನಿರ್ಮಾಣವನ್ನು ಮುಂದೂಡುತ್ತಲೇ ಬಂದಿದೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಬರವಣಿಗೆಯ ಮೂಲಕ ಹೋರಾಟ ನಡೆಸಿದ್ದ ವೀರ ಸಾವರಕರ್ ಅವರು ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು ಜುಲೈ 8ರಂದು. ಇದೇ ವರ್ಷ ಈ ಐತಿಹಾಸಿಕ ಕ್ಷಣಕ್ಕೆ ಶತಮಾನೋತ್ಸವ. ಈ ಸಂದರ್ಭದಲ್ಲಿ ಫ್ರಾನ್ಸ್ ನಲ್ಲಿ ವೀರ ಸಾವರಕರ್ ಸ್ಮಾರಕ ನಿರ್ಮಾಣವಾಗಲಿದೆ. ಫ್ರಾನ್ಸ್ ನಲ್ಲಿ ಸ್ಮಾರಕ ನಿರ್ಮಾಣವಾಗಬೇಕಾದರೆ ಭಾರತದಲ್ಲೇಕಿಲ್ಲ? ಈ ಐತಿಹಾಸಿಕ ಘಟನೆಯನ್ನು ಆಚರಿಸಲು ಸರಕಾರ ಏನು ಸಿದ್ಧತೆ ಮಾಡಿಕೊಳ್ಳುತ್ತಿದೆ?

ಮೇ 28ರಂದು ಸ್ವಾತಂತ್ರ್ಯ ಹೋರಾಟಗಾರ, ಕಟ್ಟಾ ಹಿಂದೂತ್ವವಾದಿ, ಕವಿ, ಸಾಹಿತಿ, ಸಂಸ್ಕೃತ ಪಂಡಿತ ವೀರ ಸಾವರಕರ್ ಅವರ ಜನ್ಮದಿನವನ್ನು ಯಾವುದೇ ಸದ್ದುಗದ್ದಲವಿಲ್ಲದೆ ಆಚರಿಸಲಾಯಿತು. ಕೇಂದ್ರದ ಗದ್ದುಗೆಯಲ್ಲಿ ಕುಳಿತಿರುವ ಯುಪಿಎ ಸರಕಾರ ಸುದ್ದಿಯನ್ನೂ ಮಾಡಲಿಲ್ಲ.

ಕಾಂಗ್ರೆಸ್ ನೀತಿಯನ್ನು ಜಿದ್ದಾಜಿದ್ದಿ ವಿರೋಧಿಸುತ್ತಿದ್ದ ವೀರ ಸಾವರಕರ್ ಅವರಿಗೆ ಕನಿಷ್ಠ ಗೌರವನ್ನೂ ನೀಡಲು ಕಾಂಗ್ರೆಸ್ ಯತ್ನಿಸಿಲ್ಲ. ಸ್ಮಾರಕ ನಿರ್ಮಾಣ ಮಾಡುವುದು ಹೋಗಲಿ ಸಂಸತ್ತಿನಲ್ಲಿ ತೂಗು ಹಾಕಿದ್ದ ಭಾವಚಿತ್ರವನ್ನು ಕಿತ್ತುಹಾಕಬೇಕೆಂದು ಕಾಂಗ್ರೆಸ್ ನಿರ್ಧರಿಸಿತ್ತು. ಕಾಲಾಪಾನಿ ಶಿಕ್ಷೆ ಅನುಭವಿಸಿದ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಸಾವರಕರ್ ಅವರು ಬರೆದಿದ್ದ ಘೋಷವಾಕ್ಯಗಳನ್ನು ಅಳಿಸಬೇಕೆಂದು ಕಾಂಗ್ರೆಸ್ ಹುಯಿಲೆಬ್ಬಿಸಿತ್ತು. ಇಂಥ ಸರಕಾರದಿಂದ ವೀರ ಸಾವರಕರ್ ಅವರ ಕುರಿತು ಏನನ್ನು ನಿರೀಕ್ಷಿಸಲು ಸಾಧ್ಯ?

ರಾಜಕೀಯ ಪಕ್ಷಗಳು ಹೋಗಲಿ, ಸ್ವಾತಂತ್ರ್ಯ ಯೋಧರನ್ನು ಪ್ರೀತಿಸುವ ಮತ್ತು ಗೌರವಿಸುವ ಜನಸಾಮಾನ್ಯರಿಗಾದರೂ ಏನಾಗಿದೆ? ಇಂಥ ಅಪ್ರತಿಮ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ದನಿ ಎತ್ತಿದರೆ ತಾನೆ ಅವರ ಹೋರಾಟಕ್ಕೂ ಗೌರವ ಸಲ್ಲಿಸಿದಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X