• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರೆಯರ ರಾಶಿ, ನಕ್ಷತ್ರಗಳಿಗೆ ಹೊಂದುವ ಸೀರೆ

By Rajendra
|

ಬೆಂಗಳೂರು, ಜೂ.4: ರಾಶಿ, ನಕ್ಷತ್ರಗಳಿಗೆ ಹೊಂದಾಣಿಕೆಯಾಗುವ ಅನರ್ಘ್ಯ ರತ್ನಗಳನ್ನು ನೋಡಿದ್ದೀರಿ. ಆದರೆ ರಾಶಿ, ನಕ್ಷತ್ರಗಳಿಗೆ ಹೊಂದಾಣಿಕೆಯಾಗುವ ಸೀರೆಗಳನ್ನು ನೋಡಿದ್ದೀರಾ? ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಂತಹದ್ದೊಂದು ಸೀರೆ ಮಳಿಗೆ ಆರಂಭವಾಗಿದೆ.

ರಾಶಿ, ನಕ್ಷತ್ರಗಳಿಗೆ ಹೊಂದಾಣಿಕೆಯಾಗುವ ಸೀರೆಗಳನ್ನು ಮಾರಾಟ ಮಾಡುವ ಕರ್ನಾಟಕದ ಮೊದಲ ಶೋ ರೂಂ ಎಂಬ ಖ್ಯಾತಿಗೆ ಚಿಕ್ಕಪೇಟೆಯ ಸುಮನ್ ಸಿಲ್ಕ್ಸ್ ಪಾತ್ರವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆಯುಳ್ಳವರು ಅತ್ಯಧಿಕವಾಗಿ ಈ ಮಳಿಗೆಗೆ ಭೇಟಿ ನೀಡುತ್ತಿದ್ದಾರೆ.

ವಧುವಿನ ರಾಶಿ, ಜನ್ಮ ನಕ್ಷತ್ರ ಮುಂತಾದ ವಿವರಗಳಿಗೆ ಅನುಗುಣವಾಗಿ ರತ್ನಗಳನ್ನು ಸೀರೆಗೆ ವೈವಿಧ್ಯಮಯವಾಗಿ ಪೋಣಿಸಿಕೊಡುವುದು ಇಲ್ಲಿನ ವೈಶಿಷ್ಟ್ಯ. ಅವರವರ ರಾಶಿ, ನಕ್ಷತ್ರಗಳ ವಿವರಗಳನ್ನು ಕೊಟ್ಟ ಬಳಿಕ ಸೀರೆಯನ್ನು ರೂಪಿಸಿಕೊಡಲಾಗುತ್ತದೆ ಎನ್ನುತ್ತಾರೆ ಸುಮನ್ ಸಿಲ್ಕ್ಸ್ ನ ವರ್ಷಾ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X