ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ಲೀಲ ವಿಡಿಯೋ ವೀಕ್ಷಿಸಿದ ಉದ್ಯೋಗಿಗಳು ವಜಾ

By Prasad
|
Google Oneindia Kannada News

Virgin Blue airlines, Australia
ಮೆಲ್ಬೋರ್ನ್, ಜೂ. 3 : ಕುಡಿದು ಗಾಡಿ ಓಡಿಸಿ ಸಿಕ್ಕಿಬಿದ್ದ 8 ಪೈಲಟ್ ಗಳನ್ನು ಭಾರತೀಯ ವಿಮಾನಯಾನ ಸಂಸ್ಥೆ ಮನೆಗೆ ಕಳಿಸಿದ ಬೆನ್ನಲ್ಲೇ ಕೆಲಸದ ಸ್ಥಳದಲ್ಲಿ ವಿಮಾನಯಾನ, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಚಿಂತಿಸದೆ ಕಂಪ್ಯೂಟರಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದ 20 ಜನ ಉದ್ಯೋಗಿಗಳನ್ನು ಆಸ್ಟ್ರೇಲಿಯಾದ ವಿಮಾನಯಾನ ಸಂಸ್ಥೆ ವಜಾ ಮಾಡಿದೆ.

ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ವರ್ಜಿನ್ ಬ್ಲೂ ಬ್ರಿಸ್ಬೇನ್ ನಲ್ಲಿರುವ ತನ್ನ ಮುಖ್ಯ ಕಚೇರಿಯಲ್ಲಿ ಈ ಕುರಿತು ತನಿಖೆ ನಡೆಸಿದ ಬಳಿಕ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದೆ.

ಇವರೆಲ್ಲ ವಿಮಾನಕ್ಕೆ ಇಂಧನ ತುಂಬುವ ಮತ್ತು ನಿರ್ವಹಣೆಯ ಕೆಲಸದಲ್ಲಿ ತೊಡಗುವ ಸಿಬ್ಬಂದಿಗಳು. ಇದು ಕಾನೂನು ವಿರೋಧಿ ಚಟುವಟಿಕೆಯಲ್ಲದಿದ್ದರೂ ಸರಿಯಾಗಿ ಕರ್ತವ್ಯ ನಿರ್ವಹಿಸದೆ ನೀತಿ ಸಂಹಿತೆ ಪಾಲಿಸದಿದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಅಶ್ಲೀಲ ವಿಡಿಯೋ ವೀಕ್ಷಿಸಿದ್ದಕ್ಕೆ ಒಂದೂವರೆ ವರ್ಷದ ಹಿಂದೆ ಇನ್ನೂ ಕೆಲವರನ್ನು ಕೆಲಸದಿಂದ ವರ್ಜಿನ್ ಬ್ಲೂ ಸಂಸ್ಥೆ ವಜಾ ಮಾಡಿತ್ತು.

ವಿಮಾನಯಾನ ಸಿಬ್ಬಂದಿಗಳು ಕೊಂಚ ಅಜಾಗರೂಕರಾದರೂ ಎಂಥ ಘಟನೆಗಳು ಸಂಭವಿಸುತ್ತವೆ ಎಂಬುದಕ್ಕೆ ಇತ್ತೀಚೆಗೆ ಮಂಗಳೂರು ಬಳಿಯ ಬಜ್ಪೆ ವಿಮಾನ ನಿಲ್ದಾಣದಲ್ಲಿ ಆದ ದುರ್ಘಟನೆಯೇ ಸಾಕ್ಷಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X