ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿಗಳೇ ನಿಮಗೆ ಸ್ವಾಗತ : ವಿಜಯ್ ಮಲ್ಯ

By Mahesh
|
Google Oneindia Kannada News

Vijay Mallya
ಬೆಂಗಳೂರು, ಜೂ.2 : ಜಾಗತಿಕ ಬಂಡವಾಳ ಹೂಡಿಕೆ ಸಮ್ಮೇಳನ 2010 ಆರಂಭಗೊಂಡಿದ್ದು, ಖ್ಯಾತ ಉದ್ಯಮಿಗಳು ಮುಕ್ತ ಕಂಠದಿಂದ ಸಮಾವೇಶವನ್ನು ಸ್ವಾಗತಿಸಿದ್ದಾರೆ. ಯುಬಿ ಗ್ರೂಪ್ ನ ಅಧ್ಯಕ್ಷ ವಿಜಯ್ ಮಲ್ಯ ಮಾತಾನಾಡುತ್ತಾ, ಕರ್ನಾಟಕ ದೇಶದ ಹೆಮ್ಮೆಯ ಸಂಕೇತ, ನಾನು ಈ ಮಣ್ಣಿನ ಮಗ. ಉದ್ಯಮಿಗಳೇ ನಿಮಗೆ ನನ್ನಷ್ಟೇ ಸಂತೋಷ ಹಾಗೂ ತೃಪ್ತಿ ನಮ್ಮ ರಾಜ್ಯದಿಂದ ಸಿಗಲಿದೆ ಎಂದರು.

ಬೆಂಗಳೂರಿನಲ್ಲಿ ಜ್ಞಾನ ಸಂಸ್ಕೃತಿ ಇದೆ. ಇಸ್ರೋ, ಎಚ್ ಎ ಎಲ್ ಮುಂತಾದ ಸಂಸ್ಥೆಗಳಿವೆ. ಐಟಿ ರಾಜಧಾನಿ, ನಾಲೆಡ್ಜ್ ಸಿಟಿ ಎನಿಸಿಕೊಂಡ ಮೇಲೆ ಉದ್ಯಮಿಗಳ ಸ್ವರ್ಗವಾಗಿ ಬೆಂಗಳೂರು ರೂಪುಗೊಳ್ಳಲಿದೆ. ಅಬಕಾರಿ, ವಿಮಾನಯಾನಕ್ಕೆ ಹೇಳಿ ಮಾಡಿಸಿದ ಜಾಗ ಇದು.

ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶವಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ.ಇಂತಹ ಬೃಹತ್ ಸಮಾವೇಶ ಆಯೋಜಿಸಿದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸರ್ಕಾರಕ್ಕೆ ನಿಜಕ್ಕೂ ಅಭಿನಂದನಾರ್ಹರು ಎಂದು ಯುಬಿ ಗ್ರೂಪ್ ಹಾಗೂ ಕಿಂಗ್ ಫಿಷರ್ ಮಾಲೀಕ ವಿಜಯ್ ಮಲ್ಯ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ, ಕರ್ನಾಟಕ ರಾಜ್ಯ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ತಮಿಳುನಾಡಿನ ಮಾದರಿಯಲ್ಲಿ ಉತ್ಪದನಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹೂಡುವಂತೆ ಮಾಡುವ ಅವಶ್ಯಕತೆ. ಐಟಿ ಕ್ಷೇತ್ರ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X