ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿಸಿದ ಮುರುಗೇಶ್ ನಿರಾಣಿ ಪ್ರತಿಜ್ಞೆ

By Mahesh
|
Google Oneindia Kannada News

GIM 2010, Bangalore
ಬೆಂಗಳೂರು, ಜೂ.3: ದಶಕದ ಹಿಂದೆ ಅಂದಿನ ರಾಜ್ಯ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಅವರು ಬೃಹತ್ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಿದ್ದರು. ಇದನ್ನು ನೋಡಿದ್ದ ಈಗಿನ ಭಾರಿ ಹಾಗೂ ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರುಗೇಶ್ ನಿರಾಣಿ, ಅಂದು ಪ್ರತಿಜ್ಞೆಗೈದಿದ್ದರು.

'ನಾನು ಕೈಗಾರಿಕಾ ಸಚಿವನಾಗುತ್ತೇನೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿ, ಇದಕ್ಕಿಂತ ಹತ್ತುಪಟ್ಟು ಹೆಚ್ಚಿನ ಬಂಡವಾಳ ಆಕರ್ಷಿಸುತ್ತೇನೆ. ಉದ್ಯೋಗಾವಕಾಶದ ಮಹಾಪೂರ ಹರಿಸುತ್ತೇನೆ' ಎಂದಿದ್ದರು.

ಅಂದಿನ ನಿರಾಣಿ ಪ್ರತಿಜ್ಞೆ ಇಂದು ಫಲಿಸಿದೆ. ಜಿಮ್ 2010 ಮೂಲಕ ಜಾಗತಿಕ ಮಟ್ಟದ ಬೃಹತ್ ಉದ್ಯಮಗಳು ರಾಜ್ಯಕ್ಕೆ ಕಾಲಿರಿಸಲಿವೆ. 2000 ರಲ್ಲಿ ನಡೆದಿದ್ದ ಸಮಾವೇಶದಲ್ಲಿ 13 ಸಾವಿರ ಕೋಟಿ ಬಂಡವಾಳ ಹೂಡಲಾಗಿತ್ತು. ಈ ಬಾರಿ ಸುಮಾರು 4 ಲಕ್ಷ ಕೋಟಿಗೂ ಅಧಿಕ ಬಂಡವಾಳ ನಿರೀಕ್ಷೆಯಲ್ಲಿದ್ದಾರೆ ಭಾರಿ ಹಾಗೂ ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರುಗೇಶ್ ನಿರಾಣಿ.

ಒಟ್ಟು 12 ಕ್ಷೇತ್ರ: ಏರೋಸ್ಪೇಸ್, ಖನಿಜ, ಪ್ರವಾಸೋದ್ಯಮ, ಬಯೋ ಟೆಕ್ನಾಲಜಿ, ಆಟೋಮೊಬೈಲ್ಸ್, ಐಟಿ, ಮೂಲಸೌಕರ್ಯ, ವಿದ್ಯುಚ್ಛಕ್ತಿ, ಆಹಾರ ಸಂಸ್ಕರಣೆ, ಜವಳಿ . ಆರೋಗ್ಯ ಹಾಗೂ ಶಿಕ್ಷಣ.

ಎರಡು ದಿನಗಳಲ್ಲಿ 400 ಒಡಂಬಡಿಕೆಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಉಕ್ಕು ಉದ್ಯಮದಲ್ಲಿ ಜಾಗತಿಕವಾಗಿ ನಂ.1 ಸ್ಥಾನದಲ್ಲಿರುವ ಆರ್ಸೆಲರ್ ಮಿತ್ತಲ್ ಅತ್ಯಧಿಕ 30 ಸಾವಿರ ಕೋಟಿ ರು. ಬಂಡವಾಳ ಹೂಡಿದ್ದಾರೆ. ಕೈಗಾರಿಕೆಗಳಿಗಾಗಿ ಒಟ್ಟು 63 ಸಾವಿರ ಎಕರೆ ಭೂಮಿ ಗುರುತಿಸಲಾಗಿದ್ದು, ಇನ್ನು 40 ಸಾವಿರ ಎಕರೆ ಸೇರ್ಪಡೆಯ ಭರವಸೆ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಶೇ.60ರಷ್ಟು ಬಂಡವಾಳ ಹೂಡಲು ಯೋಜಿಸಲಾಗಿದೆ.

ದಶಕ ಹಿಂದೆ ಮುರುಗೇಶ್ ನಿರಾಣಿ ಮಾಡಿದ ಪ್ರತಿಜ್ಞೆ ಇಂದು ಫಲಿಸಿದೆ
ಇಂದು ಒಟ್ಟು 41 ಯೋಜನೆಗಳಿಗೆ ಒಡಂಬಡಿಕೆ (MoU) ಅಂಕಿತ ಬಿತ್ತು. ಸುಮಾರು 2.21 ಲಕ್ಷ ಕೋಟಿ ರು ಬಂಡವಾಳ ಹೂಡಿಕೆ ಖಾತ್ರಿಯಾಯ್ತು.

*ಆರ್ಸೆಲರ್ ಮಿತ್ತಲ್ >>30, 000 ಕೋಟಿ ರು.
* ಬ್ರಹ್ಮಣಿ ಸ್ಟೀಲ್ ಲಿ>> 36,000 ಕೋಟಿ ರು.
* ಭಾಷ್ಯಾನ್ ಸ್ಟೀಲ್ಸ್ ಲಿ>>27,928 ಕೋಟಿ ರು.
* ಸೂರ್ಯ ವಿಜಯನಗರ ಸ್ಟೀಲ್ ಹಾಗೂ ಪವರ್ ಲಿ>> 24,000 ಕೋಟಿ ರು.
* ಹಜೀರಾ ಸ್ಟೀಲ್ಸ್>> 17,000 ಕೋಟಿ ರು. >> ಬಾಗಲಕೋಟೆ

* ಶೆಲ್ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರ>> 1,376 ಕೋಟಿ ರು. >> ಬೆಂಗಳೂರು
* ಯುಬಿ ಗ್ರೂಪ್ >> 55 ಕೋಟಿ ರು. >> ನಂಜನಗೂಡು
* ನಾರಾಯಣ ಹೃದಯಾಲಯ >> 990 ಕೋಟಿ ರು. >> ದೇವನಹಳ್ಳಿ, ಬೆಂಗಳೂರು
* ವಿಪ್ರೋ : ಸಾಫ್ಟ್ ವೇರ್ ಕೇಂದ್ರ >> 537 ಕೋಟಿ ರು >> ಸರ್ಜಾಪುರ ರಸ್ತೆ, ಬೆಂಗಳೂರು
* ಇನ್ಫೋಸಿಸ್ ಸಾಫ್ಟ್‌ವೇರ್ >> 2,050 ಕೋಟಿ ರು.
* ಟಾಟಾ ಎಲೆಕ್ಸಿ ಹಾರ್ಡ್ ವೇರ್ >> 486 ಕೋಟಿ ರು

* ಗೇಲ್ ಗ್ಯಾಸ್ ಪೈಪ್ ಲೈನ್ : 8,656 ಕೋಟಿ ರು
* ರಿಲಯನ್ಸ್ ಗ್ಯಾಸ್ ಪೈಪ್ ಲೈನ್ : 6,796 ಕೋಟಿ ರು
* ಲಫಾರ್ಜ್ ಸಿಮೆಂಟ್ >> 1,500 ಕೋಟಿ ರು
* ಬಿರ್ಲಾ ಸಿಮೆಂಟ್ >> 3,000ಕೋಟಿ ರು

*ನೆಸ್ಟಲ್ ಇನ್ಪಾಟ್ ನ್ಯೂಡೆಲ್ಸ್>>349.23 ಕೋಟಿ ರು.
*ಮೇಯರ್ ಅರ್ಗಾನಿಕ್ ಫಾರ್ಮಾಸ್ಯೂಟಿಕಲ್ಸ್ >>45 ಕೋಟಿ ರು.
* ಅಮರಾ ಕಾರ್ಪೋರೇಷನ್ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ>>45 ಕೋಟಿ ರು.
* ಎಂಆರ್‌ಪಿಎಲ್, ಒಎನ್‌ಜಿಸಿ ಪೆಟ್ರೋ ಕೆಮಿಕಲ್>>8,656 ಕೋಟಿ ರು.
* ಜುವಾರಿ ಫರ್ಟಿಲೈಸರ್ಸ್ ಯೂರಿಯಾ ಫ್ಲಾಟ್-6,565 ಕೋಟಿ ರು.
* ರಿಲಯನ್ಸ್ ಸಿಮೆಂಟ್ ಘಟಕ >>2,500 ಕೋಟಿ ರು.
* ಬಿಇಎಂಎಲ್ ಏರ್‌ಕ್ರಾಫ್ಟ್ ಘಟಕ-316 ಕೋಟಿ ರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X