ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿದು ಗಾಡಿ ಓಡಿಸಿದ 8 ಪೈಲಟ್ಟುಗಳು ವಜಾ

By Rajendra
|
Google Oneindia Kannada News

DGCA sacks eight drunken pilots
ನವದೆಹಲಿ, ಜೂ.3: ಗುಂಡು ಹಾಕಿ ಗಾಡಿ ಓಡಿಸಿದ ಆಪಾದನೆಯ ಮೇಲೆ ಎಂಟು ಮಂದಿ ಪೈಲಟ್ ಗಳನ್ನು ಡಿಸ್ ಮಿಸ್ ಮಾಡಲಾಗಿದೆ. ನೂರಾರು ಪ್ರಯಾಣಿಕರ ಜೀವಕ್ಕೆ ಸಂಚಕಾರ ತರಬಲ್ಲ ಅತ್ಯಂತ ಅಪಾಯಕಾರಿ ನಡವಳಿಕೆಗೆ ದಾಸರಾದ ಗುಂಡುಗೋವಿ ಪೈಲೆಟ್ಟುಗಳನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಭಾರತೀಯ ನಾಗರಿಕ ವಿಮಾನಯಾನ(DGCA)ಮಹಾ ನಿರ್ದೇಶಕರು ತಿಳಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವಾಗ ಈ ಪೈಲಟ್ ಗಳು ಗುಂಡು ಹಾಕಿದ್ದರು ಎಂಬ ಅಂಶ ಪರೀಕ್ಷೆಯಿಂದ ದೃಢಪಟ್ಟಿತ್ತು.

ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕರು ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ವಿಮಾನ ಚಾಲನೆ ನಿಯಮಗಳನ್ನು ಉಲ್ಲಂಘಿಸಿದ ಇಂಥ ಎಂಟು ಮದಿ ಪೈಲೆಟ್ಟುಗಳನ್ನು ಕಳೆದ ವರ್ಷ ಮನೆಗೆ ಕಳಿಸಲಾಗಿದೆ. ಮದ್ಯ ಸೇವಿಸಿ ವಿಮಾನ ಚಲಿಸಿರುವ ಆಪಾದನೆಯ ಮೇರೆಗೆ ಒಟ್ಟು 42 ಮಂದಿ ಪೈಲಟ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 21 ಮಂದಿ ಮದ್ಯ ಸೇವಿಸಿರುವುದು ದೃಢಪಟ್ಟಿತ್ತು. ಇವರ ಪೈಕಿ ಎಂಟು ಮಂದಿಯನ್ನು ಸೇವೆಯಿಂದ ವಜಾ ಮಾಡಿ ಉಳಿದವರನ್ನು ಅಮಾನತ್ತಿನಲ್ಲಿ ಇಡಲಾಗಿದೆ.

ಆದರೆ, ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದ ಇನ್ನೂ 28 ಮಂದಿ ಪೈಲಟ್ ಗಳ ವಿರುದ್ಧ ಡಿಜಿಸಿಎ ಯಾವುದೇ ಕ್ರಮ ಕೈಗೊಂಡಿಲ್ಲ. ತಾವು ಕೇಳಿದ ಮಾಹಿತಿ ಬಗ್ಗೆ ಡಿಜಿಸಿಎ ಕರರುವಾಕ್ಕು ಮಾಹಿತಿ ನೀಡಿಲ್ಲ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದ ಅಭಿಷೇಕ್ ಶುಕ್ಲಾ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಒಂದು ಪೆಗ್ ಕುಡಿದು ದ್ವಿಚಕ್ರ ವಾಹನ ಓಡಿಸಿದರೆ ಪೊಲೀಸರು ಬೆನ್ನಟ್ಟಿಕೊಂಡು ಬಂದು ಬೆಂಡು ಎತ್ತುತ್ತಾರೆ. ಅಂಥದ್ದರಲ್ಲಿ ಸಾವಿರ ಕೋಟಿ ಬೆಲೆಬಾಳುವ ಏರ್ ಕ್ರಾಫ್ಟ್ ಗಳಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತು ಸಾಗುವ ಪೈಲಟ್ಟುಗಳು ಡ್ರಂಕನ್ ಡ್ರೈವಿಂಗ್ ಆಪಾದನೆಯಿಂದ ಬಚಾವಾಗುತ್ತಾರೆಂದರೆ ಆಶ್ಚರ್ಯವೇ ಆಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X