ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪ್ಯಾಡ್ ತದ್ರೂಪ ಐಪೆಡ್ ಬಂದಿದೆ, ಎಚ್ಚರ!

By Prasad
|
Google Oneindia Kannada News

Iped by China
ಒಂದು ಉತ್ಪನ್ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತಿದ್ದಂತೆ ಅದರ ಲಾಭ ಅಥವಾ ದುರ್ಲಾಭ ಪಡೆಯಲು ಅದರಂತೆಯೇ ಇರುವ ತದ್ರೂಪು ಉತ್ಪನ್ನಗಳನ್ನು ಉತ್ಪಾದಿಸುವುದು ಜಾಗತಿಕ ವಿದ್ಯಮಾನ. ಬ್ಲಾಕ್ ಬೆರ್ರಿ ಜನಸಾಮಾನ್ಯರ ಜೇಬು ಸೇರುತ್ತಿದ್ದಂತೆ ಬ್ಲಾಕ್ ಚೆರ್ರಿ ಅನ್ನುವ ಮೊಬೈಲ್ ಕೂಡ ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ನಮ್ಮ ಚೀನಿ ಭಾಯಿಗಳು ಅಗ್ರಗಣ್ಯರು ಎಂಬುದು ಓಪನ್ ಸಿಕ್ರಿಟ್.

ಅವರು ಒಂದು ಹೊಸ ಬ್ರಾಂಡಿನ ವಾಚ್‌ನ್ನು ತೋರಿಸಿದ ಅರ್ಧ ಗಂಟೆಯೊಳಗೆ ಅದರ ತದ್ರೂಪದ ನಕಲಿ ವಾಚ್‌ನ್ನು ತಯಾರಿಸಬಲ್ಲರು. ಈಗ ipad ತರಹವೇ ಕಾಣುವ ipedನ್ನು ಉತ್ಪಾದಿಸಿರುವ ಚೀನಿಯರು ಅದನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.

ಆಪಲ್‌ನ ದೊರೆ ಸ್ಟೀವ್‌ ಜಾಬ್ಸ್ ರವರ ಇತ್ತೀಚಿನ ಯಶಸ್ಸು ಈ iPad. ಈಗಾಗಲೇ ಮಾರುಕಟ್ಟೆಯಲ್ಲಿದ್ದ ಬೇರೇ ಈ-ರೀಡರ್‍ ಗಳಿಗೆ ಸವಾಲಾಗಿ ತನ್ನ ಅಧಿಪತ್ಯವನ್ನು ಯಶಸ್ವಿಯಾಗಿ ವಿಸ್ತರಿಸಿದ್ದ iPadಗೆ ಈಗ ತನ್ನದೇ ತದ್ರೂಪ iPed ನೋಡಿ ಸಂಭ್ರಮಿಸುವ ಅವಕಾಶ ಎದುರಾಗಿದೆ.

ನೋಡಲು ತೇಟ್‌ iPad ತರಹನೇ ಇರೋ ಈ iPed, ನಮ್ಮ ಪಕ್ಕದ (ಮೇಲಿನ?) ಚೀನಿಗಳ ಕೊಡುಗೆ. ಬನ್ನಿ ನೋಡೋಣ iPedನ ಕೆಲವು ಗುಣಗಳನ್ನು.

* ಗೂಗಲ್‌ ನ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 1.5ನಲ್ಲಿ ಕಾರ್ಯನಿರ್ವಹಿಸಬಲ್ಲದು.
* 16 ಜಿಬಿ ಮೆಮೊರಿ, 1 ಜಿಬಿ ರಾಮ್.
* 7 ಇಂಚಿನ ಸ್ಕ್ರೀನ್ (ipadಗಿಂತ ಚಿಕ್ಕದು)
* ಡಿಸ್ಪ್ಲೇ 800 x 400 ಪಿಕ್ಸೆಲ್ಸ್.

iPadಗಿಂತ iped ತೂಕ ಸ್ವಲ್ವ ಹೆಚ್ಚು. ಆದರೆ ಬೆಲೆ ಕೇವಲ 150 ಅಮೆರಿಕನ್ ಡಾಲರ್‍ಗಳು. ಅಂದರೆ iPad ಗಿಂತ ನಾಲ್ಕರಷ್ಟು ಸೋವಿ. iped ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X