ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಯೋ ಮೇಳ2010 ಶುರು

By Mahesh
|
Google Oneindia Kannada News

BSY inaugurates Bangalore Bio 2010
ಬೆಂಗಳೂರು, ಜೂ.2: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(ಜಿಐಎಂ)ದ ಮೇಲೆ ಎಲ್ಲರ ಚಿತ್ತ ನೆಟ್ಟಿದೆಯಾದರೂ, ಬೆಂಗಳೂರು ಇಂಡಿಯಾ ಬಯೋ ಮೇಳ 2010ಕ್ಕೆ ಉತ್ತಮವಾದ ಚಾಲನೆ ದೊರೆಯಿತು.

ಹೋಟೆಲ್ ಲಲಿತ್ ಅಶೋಕ್ ನಲ್ಲಿ ನಡೆದ ಸಮಾರಂಭದಲ್ಲಿಂದು 10 ನೇ ಬಯೋ ಮೇಳಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಐಟಿ ಬಿಟಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಚಾಲನೆ ನೀಡಿದರು. ಶುಕ್ರವಾರದಂದು ಬಯೋ ಮೇಳ ಮುಕ್ತಾಯವಾಗಲಿದೆ.

ಬೆಂಗಳೂರು ಬಯೋಟೆಕ್ ಪಾರ್ಕ್, ಆಗ್ರಿ ಬಯೋಟೆಕ್ ಪಾರ್ಕ್ , ಧಾರವಾಡ, ಮರೈನ್ ಬಯೋಟೆಕ್ ಪಾರ್ಕ್, ಮಂಗಳೂರು, ವಿವರಿಯಂ, ಬೀದರ್ ಹಾಗೂ ನ್ಯೂಟಿ ನ್ಯೂಟ್ರಸ್ಯೂಟಿಕಲ್ ಪಾರ್ಕ್ ಮತ್ತು ಫೈ ಟೋ ಫಾರ್ಮಸ್ಯೂಟಿಕಲ್ ಪಾರ್ಕ್, ಸಿಎಫ್ ಟಿ ಆರ್ ಐ, ಮೈಸೂರು ಇವು ಸರ್ಕಾರ ಖಾಸಗಿ ಸಹ ಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಯೋಜನೆಗಳಾಗಿವೆ. 8 ಸಾವಿರ ಜನಕ್ಕೆ ಉದ್ಯೋಗ ಸಿಗುವ ನಿರೀಕ್ಷೆಯಿದೆ ಎಂದು ಯಡಿಯೂರಪ್ಪ ಹೇಳಿದರು.

ಸುಮಾರು 18 ದೇಶಗಳ 400 ಕಂಪೆನಿಗಳ 750 ಪ್ರತಿನಿಧಿಗಳು ಬೆಂಗಳೂರು ಬಯೋಮೇಳದಲ್ಲಿ ಪಾಲ್ಗೊಳ್ಳ್ಳಲಿದ್ದಾರೆ. ಆದರೆ, ಮೂಲ ಸೌಕರ್ಯ ಕೊರತೆ ಇನ್ನೂ ಹಾಗೆ ಇದೆ. ಬಯೋ ಸ್ಕೂಲ್ ಗಳಿಂದ ಬರುವ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಪೂರಕವಾದ ತರಬೇತಿ ಕೇಂದ್ರಗಳ ಸ್ಥಾಪನೆಗೆ ಸರ್ಕಾರವನ್ನು ಕೋರಲಾಗಿದೆ. ದೇಶದಲ್ಲಿರುವ 380 ಬಯೋ ಟೆಕ್ ಕಂಪೆನಿಗಳಲ್ಲಿ 198 ಕರ್ನಾಟಕದಲ್ಲಿದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜಂ ದಾರ್ ಷಾ ಹೇಳಿದರು.

ಐಟಿ ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿಅಶೋಕ್ ಕುಮಾರ್ ಮನೋಳಿ ಮಾತನಾಡಿ, ಜಾಗತಿಕ ಬಂಡವಾಳ ಹೂಡಿಕೆ ಸಮ್ಮೇಳನದಲ್ಲಿ ಬಯೋ ಟೆಕ್ ಕೇಂದ್ರಗಳ ಬಗ್ಗೆ ವಿಶೇಷ ಪ್ರಾತ್ಯಕ್ಷಿಕೆ ಇರುತ್ತದೆ. ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿ ಹೆಚ್ಚಿನ ಬಂಡಾವಳ ಹೂಡಿಕೆಗೆ ಆದ್ಯತೆ ನೀಡಲಾಗಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X