ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5ಲಕ್ಷ ಕೋಟಿ ಬಂಡವಾಳ=5ಲಕ್ಷ ಉದ್ಯೋಗ

By Mahesh
|
Google Oneindia Kannada News

Murugesh Nirani
ಬೆಂಗಳೂರು ,ಜೂ. 2: ಜೂನ್ 3ರಿಂದ ನಗರದ ಅರಮನೆ ಮೈದಾನದಲ್ಲಿ ಪ್ರಾರಂಭವಾಗಲಿರುವ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಸರ್ಕಾರ ಸುಮಾರು 5 ಲಕ್ಷ ಕೋಟಿ ರೂಪಾಯಿಗೂ ಅಧಿಕ ಕರಡು ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಪ್ರಮುಖ ಜಾಗತಿಕ ಹೂಡಿಕೆದಾರರಾದ ಆರ್ಸೆಲರ್ ಮಿತ್ತಲ್, ಶೆಲ್, ಲಫಾರ್ಜ್ , ಟಾಟಾ ಎಲಕ್ಸಿ, ಬಿರ್ಲಾ ಸಿಮೆಂಟ್, ರಿಲಯನ್ಸ್, ವಿಪ್ರೋ, ಇನ್ಫೋಸಿಸ್, ಗೇಲ್, ಎಮ್ ಆರ್ ಪಿ ಎಲ್ ಲಕ್ಸರ್ ಎನರ್ಜಿ, ಕಂಪೆನಿಗಳೊಂದಿಗೆ ಸುಮಾರು 400 ಕ್ಕೂ ಅಧಿಕ ಮೆಮೊರಾಂಡಮ್ ಆಫ್ ಅಂಡರ್ ಸ್ಟಾಂಡಿಂಗ್(MoU)ಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಟಾಟಾದ ಉಪಾಧ್ಯಕ್ಷ ಮುತ್ತುರಾಮನ್ ನೇತೃತ್ವದ 15 ಜನ ಅಧಿಕಾರಿಗಳ ತಂಡ 10 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಸಹಿ ಹಾಕಲಿದೆ. ಮುಂದಿನ ವರ್ಷಗಳಲ್ಲಿ 12,000 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ತನ್ನು ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಳೆ ನೀರಿನ ಕೊಯ್ಲಿಗೂ ಸರ್ಕಾರ ಮುಂದಾಗಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್ ಗಳ ಮುಖ್ಯಸ್ಥರೂ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು, ಸಾಲ ನೀಡಲು ಆಸಕ್ತಿ ತೋರಿದ್ದಾರೆ ಎಂದ ನಿರಾಣಿ ಅವರು ಸಿಂಡಿಕೇಟ್ ಬ್ಯಾಂಕ್ ಸುಮಾರು 6,000 ಕೋಟಿ ರೂಪಾಯಿಗಳ ಸಾಲ ನೀಡಲಿದೆ ಎಂದರು.

ವಿಶ್ವದ ಅತಿ ದೊಡ್ಡ ಉಕ್ಕು ತಯಾರಕ ಲಕ್ಷ್ಮಿ ಮಿತ್ತಲ್, ಕುಮಾರಮಂಗಳಂ ಬಿರ್ಲಾ, ಜೆಕೆ ಟೈರ್‍ಸ್ ನ ರಘುಪತಿ, ಜೆ ಎಸ್ ಡ್ಬ್ಬ್ಲ್ಯೂ ಸ್ಟೀಲ್ಸ್ ನ ಸಜ್ಜನ್ ಜಿಂದಾಲ್, ವಿಕ್ರಮ್ ಕಿರ್ಲೋಸ್ಕರ್, ಯು ಬಿ ಸಮೂಹದ ವಿಜಯ್ ಮಲ್ಯ, ಜಿ ಎಮ್ ಆರ್ ಸಮೂಹದ ಜಿ ಎಮ್ ರಾವ್ ಅವರು ಸೇರಿದಂತೆ ಸುಮಾರು 2000 ಹೂಡಿಕೆದಾರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರಾಣಿ ಹೇಳಿದರು. ಅರುಣ್ ಜೈಟ್ಲಿ ಜಿಐಎಂ2010 ಉದ್ಘಾಟಿಸಲಿದ್ದಾರೆ. ಕಾನೂನು ಸಚಿವ ಎಂ ವೀರಪ್ಪಮೊಯ್ಲಿ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X