ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಗುತ್ತಿಗೆಗೆ ಕಡಿವಾಣ, ಸ್ಥಳೀಯರಿಗೆ ಆದ್ಯತೆ

By Mahesh
|
Google Oneindia Kannada News

New US Policy may make outsourcing tough for MNCs
ನವದೆಹಲಿ, ಜೂ.1: ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳ ಹೊರಗುತ್ತಿಗೆಗೆ ಕಡಿವಾಣ ಹಾಕಿ, ಸ್ಥಳೀಯರಿಗೆ ಉದ್ಯೋಗವಕಾಶ ನೀಡಲು ಅಲ್ಲಿನ ಕಾನೂನು ಅಧಿಕಾರಿಗಳು ಯೋಜಿಸಿದ್ದಾರೆ. ಈ ಕಾನೂನು ಜಾರಿಯಾದರೆ ಭಾರತದ ಹೊರಗುತ್ತಿಗೆ ಮೇಲಷ್ಟೇ ಅಲ್ಲದೆ, ವಿದೇಶದಲ್ಲಿರುವ ಭಾರತೀಯ ಮೂಲ ಕಂಪೆನಿಯ ನೇಮಕಾತಿಯ ಮೇಲೂ ಪರಿಣಾಮ ಬೀರಲಿದೆ. ಅಮೆರಿಕದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ, ಉತ್ಪಾದನೆ, ರೀಟೇಲ್ ಮತ್ತು ನಿರ್ಮಾಣ ಉದ್ಯಮವನ್ನು ಪುನರುಜ್ಜೀವನ ಗೊಳಿಸಲು ಒಬಾಮಾ ಸರ್ಕಾರ ಮುಂದಾಗಿದೆ.

ಸ್ಥಳೀಯರಿಗೆ ಆದ್ಯತೆ: ಅಮೆರಿಕದ ಐಬಿಎಂ ಮತ್ತು ಜಿಇ ಕಂಪೆನಿಗಳು ಕೆಲಸದ ಹೊರಗುತ್ತಿಗೆಯನ್ನು ಅಗ್ಗದ ದರದ ಕೆಲಸಗಾರರು ಸಿಗುವ ಭಾರತ ಮತ್ತಿತರ ದೇಶಗಳಿಗೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಲು ಕಂಪೆನಿಗಳ ಅಂತಾರಾಷ್ಟ್ರೀಯ ವಹಿವಾಟಿನ ಮೇಲೆ ತೆರಿಗೆ ವಿಧಿಸಲು ಹಾಗೂ ಆ ಮೂಲಕ ಅಮೇರಿಕಾದ ನಾಗರಿಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು ನಿರ್ಧರಿಸಲಾಗಿದೆ.

ಕಳೆದ ತಿಂಗಳು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಮೆರಿಕದ ಕೆಲಸ ಮತ್ತು ತೆರಿಗೆ ತಪ್ಪಿಸುವ ತಡೆ ಕಾಯ್ದೆ (American Jobs and Closing Tax Loopholes Act)ಯನ್ನು 215-204 ಮತಗಳಿಂದ ಸೆನೆಟ್ ಅಂಗೀಕರಿಸಿದೆ. ಸುಮಾರು 112 ಬಿಲಿಯನ್ ಡಾಲರ್ ವೆಚ್ಚದ ಈ ಕಾಯ್ದೆ ಯ ಕುರಿತು ಸೆನೆಟ್ ಜೂನ್ 7 ರಂದು ಚರ್ಚಿಸಲಿದೆ ಎನ್ನಲಾಗಿದೆ.

ಯುಎಸ್ ನಲ್ಲೂ ನಿರುದ್ಯೋಗ ಸಮಸ್ಯೆ: ಅಮೆರಿಕದಲ್ಲಿ ಪ್ರಸ್ತುತ ನಿರುದ್ಯೋಗ ಸಮಸ್ಯೆ ಶೇ 9.9 ಕ್ಕೇರಿದ್ದು ಕಾನೂನು ತಜ್ಞರ ಮೇಲೆ ಕೆಲಸ ಸೃಷ್ಟಿಸುವ ಒತ್ತಡ ಬಿದ್ದಿದ್ದು, ಬಹುರಾಷ್ಟ್ರೀಯ ಕಂಪೆನಿಗಳು ಅಮೆರಿಕದಲ್ಲಿ ತಮ್ಮ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಹೊರರಾಷ್ಟ್ರಗಳಲ್ಲಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುತ್ತಿರುವದರ ವಿರುದ್ಧ ಕಠಿಣ ನಿಯಮಾವಳಿಗೆ ಮುಂದಾಗಿದ್ದಾರೆ.

ಭಾರತದ 60 ಬಿಲಿಯನ್ ಡಾಲರ್ ಮೌಲ್ಯದ ಹೊರಗುತ್ತಿಗೆ ವಹಿವಾಟು ನಡೆಸುತ್ತಿರುವ ಪ್ರಮುಖ ಗ್ರಾಹಕರಾದ ಜಿಇ ಮತ್ತು ಸಿಟಿ ಸಮೂಹ ನೂತನ ನಿಯಮಾವಳಿಯಿಂದ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ಕೆಲಸದ ಹೊರಗುತ್ತಿಗೆಗಿಂತ ಇದು ಅಮೆರಿಕದ ವಿಷಯವಾಗಿದೆ ಎಂದ ನಾಸ್ಕಾಮ್ ಅಧ್ಯಕ್ಷ ಸೋಮ್ ಮಿತ್ತಲ್ ಅವರು ಹೊಸ ಕಾಯ್ದೆಯಿಂದ ಅಮೆರಿಕದ ಕಂಪೆನಿಗಳ ಸ್ಪರ್ಧಾತ್ಮಕತೆ ಕಡಿಮೆಯಾಗಲಿದೆ ಎಂದರು. ಅಮೆರಿಕದ ಕಂಪೆನಿಯೊಂದು ಯೂರೋಪ್ ನಲ್ಲಿ ಗಳಿಸಿದ ಆದಾಯಕ್ಕೆ ಶೇ.15 ತೆರಿಗೆ ವಿಧಿಸಿದರೆ ಕಂಪೆನಿಯ ಮೇಲೆ ಎರಡರಷ್ಟು ಹೊಡೆತ ಬೀಳಲಿದೆ ಎಂದು ಅವರು ಹೇಳಿದರು.

ಸಿಟಿ ಗ್ರೂಪ್ ಚೇತರಿಕೆ: ಉದಾಹರಣೆಗೆ ಸಿಟಿ ಗ್ರೂಪ್ 2007 ರಲ್ಲಿ ತನ್ನ ಆದಾಯದ ಶೇ.52 ರಷ್ಟನ್ನು ಹೊರರಾಷ್ಟ್ರಗಳಿಂದ ಗಳಿಸಿದ್ದು ಇದರ ಶೇ.60ರಷ್ಟು ನೌಕರರು ಇತರ ದೇಶಗಳಲ್ಲಿದ್ದಾರೆ. ನೂರಕ್ಕೂ ಅಧಿಕ ದೇಶಗಳಲ್ಲಿ ಬ್ಯಾಂಕಿಂಗ್ ವಹಿವಾಟು ನಡೆಸುತ್ತಿರುವ ಸಿಟಿ ಸಮೂಹದ ಆದಾಯ ಜಾಗತಿಕ ಹಿಂಜರಿತದ ನಂತರ 2008 ರಲ್ಲಿ ಶೇ.74 ಹೆಚ್ಚಿದೆ.

ಭಾರತದ ಪ್ರಮುಖ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಹಾಗೂ ಎಚ್ ಸಿಎಲ್ ಗಳು ಅಟ್ಲಾಂಟ ಮತ್ತು ಮಿಚಿಗನ್ ನಲ್ಲಿ ಸಾಫ್ಟ್ ವೇರ್ ಅಭಿವೃದ್ದಿ ಕೇಂದ್ರಗಳನ್ನು ತೆರೆದಿದೆ. ಟಿಸಿಎಸ್ ತನ್ನ ಅಮೆರಿಕದ ನೌಕರರ ಸಂಖ್ಯೆಯನ್ನು ಈಗಿನ 10 ಸಾವಿರದಿಂದ 20 ಸಾವಿರಕ್ಕೇರಿಸಲು ನಿರ್ಧರಿಸಿದೆ. ಮುಂದಿನ 3 ರಿಂದ 5 ವರ್ಷಗಳಲ್ಲಿ ತಮ್ಮ ವಿದೇಶಿ ನೌಕರರ ಸಂಖ್ಯೆಯನ್ನು ಈಗಿನ ಶೇ.5 ರಿಂದ ಶೇ.10-15ಕ್ಕೇರಿಸಲು ವಿಪ್ರೋ ಮತ್ತು ಇನ್ಫೋಸಿಸ್ ನಿರ್ಧರಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X