ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಕ್ಕೇರಿದ ಹಳದಿ ಲೋಹದ ಬೆಲೆ

By Mahesh
|
Google Oneindia Kannada News

Gold rates rise
ಮುಂಬೈ/ಬೆಂಗಳೂರು, ಜೂ.1: ಈ ಬಾರಿ ಅಕ್ಷಯ ತದಿಗೆ ದಿನ ವ್ಯಾಪಾರ ಇಳಿಮುಖ ಕಂಡರೂ, ಹಳದಿ ಲೋಹದ ಬೆಲೆ ಕುಗ್ಗಿಲ್ಲ. ಪ್ರತಿ10 ಗ್ರಾಂಗೆ19 ಸಾವಿರ ರು ಗಡಿ ದಾಟಿರುವ ಸರ್ವಕಾಲಿಕ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಆದರೂ, ಮದುವೆ ಸೀಸನ್ ಶುರುವಾಗಿರುವುದರಿಂದ ಚಿನ್ನದ ಖರೀದಿ ಮಾಡಲು ಗ್ರಾಹಕರು ಹಿಂದೇಟು ಹಾಕುವ ಲಕ್ಷಣಗಳು ತೋರಿದೆ.

ಚಿನಿವಾರ ಪೇಟೆ ಮಾಹಿತಿಯಂತೆ 10 ಗ್ರಾಂ ಗಟ್ಟಿ ಚಿನ್ನದ ಬೆಲೆ 19,050 ರು ಹಾಗೂ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 19,420 ರು ಆಗಿದೆ. ಮೇ. 26 ರಂದು ಅತ್ಯಧಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ 18,648 ರು ಗಡಿ ಮುಟ್ಟಿತ್ತು. ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದು ಪರಿಣಾಮ ದೇಸಿ ಮಾರುಕಟ್ಟೆಯಲ್ಲೂ ಚಿನ್ನ ತನ್ನ ಪ್ರಾಬಲ್ಯ ಮೆರಯ ತೊಡಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X