ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರೂಜಿಗೆ ಗುರಿ ಇಟ್ಟವರು ಯಾರು?

By Shami
|
Google Oneindia Kannada News

Ravishankar Guruji
ಬೆಂಗಳೂರು, ಮೇ. 31 : ಶ್ರೀರವಿಶಂಕರ್ ಗುರೂಜಿ ಅವರನ್ನು ಹತ್ಯೆ ಮಾಡಲು ಯತ್ನಿಸಿದವರು ಯಾರು? ಹತ್ಯೆಯ ಹಿಂದಿನ ಉದ್ದೇಶವಾದರೂ ಏನು, ಇದು ಒಬ್ಬ ವ್ಯಕ್ತಿ ಮಾಡಿದ ಕೃತ್ಯವೇ ಅಥವಾ ಕೊಲೆ ಯತ್ನದ ಹಿಂದೆ ಯಾವುದಾದರೂ ಗುಂಪಿನ ಕೈವಾಡವಿದೆಯೇ?

ಸಮಗ್ರ ತನಿಖೆ ಆರಂಭವಾಗಿದ್ದು ಆರೋಪಿಗಳ ಪತ್ತೆಗೆ ತಲಘಟ್ಟಪುರ ಪೊಲೀಸರು, ಐಜಿಪಿ ಕಮಲ್ ಪಂತ್ ತೀವ್ರ ತನಿಖೆ ಆರಂಭಿಸಿದ್ದರಾದರೂ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಮಲ್ಲಿಕಾರ್ಜುನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಅತ ಗುಂಡೇಟು ತಿಂದ ಗುರೂಜಿ ಶಿಷ್ಯ ವಿನಯ್ ಅವರ ತಂದೆ ಎನ್ನಲಾಗಿದೆ. ವಿಚಾರಣೆ ಮುಂದುವರೆದಿದೆ.

ವಿಡಿಯೋ:ಇಂಥ ದಾಳಿಗಳಿಗೆ ಅಂಜುವವನು ನಾನಲ್ಲ:ಶ್ರೀಶ್ರೀ

ಭಾನುವಾರ ಸಂಜೆ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಸಂಜೆ 6 ಗಂಟೆಗೆ ಧ್ಯಾನ ಶಿಬಿರ ಮುಗಿಸಿ ಕಾರುಹತ್ತುತ್ತಿದ್ದ ರವಿಶಂಕರ್ ಅವರತ್ತ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ. ಆದರೆ, ಗುಂಡು ಶ್ರೀಗಳನ್ನು ತಾಕದೆ ಭಕ್ತನೊಬ್ಬನಿಗೆ ಬಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

ಪ್ರತಿತಿಂಗಳ ಕೊನೆಯ ಭಾನುವಾರ ಗುರೂಜಿ ಆಶ್ರಮದಲ್ಲಿ ಸಂತ್ಸಂಗ ಕಾರ್ಯಕ್ರಮ ನಡೆಸುತ್ತಾರೆ. ಭಕ್ತಾದಿಗಳನ್ನು ಉದ್ದೇಶಿಸಿ ಪ್ರವಚನ ಮಾಡುವುದು ವಾಡಿಕೆ. ನಿನ್ನೆ ಭಾನುವಾರವು ಸಾವಿರಾರು ಭಕ್ತರು ಕಲೆತಿದ್ದರು. ಧ್ಯಾನ ಶಿಬಿರ ಮುಗಿದ ತಕ್ಷಣ ಗುರೂಜಿ ಕೊಲೆ ಪ್ರಯತ್ನ ನಡೆದಿದೆ.

ವಿಡಿಯೋ:ಗುಂಡು ಹಾರಿಸಿದವನನ್ನು ನಾನು ಕ್ಷಮಿಸಿದ್ದೇನೆ: ಶ್ರೀಶ್ರೀ

ರವಿಶಂಕರ್ ಅವರ ಪ್ರಾಣಕ್ಕೆ ಅಪಾಯ ಇರುವ ಬಗ್ಗೆ ಕೇಂದ್ರ ಗುಪ್ತ ದಳ ಮತ್ತಿತರ ಭದ್ರತಾ ಸಂಸ್ಥೆಗಳು ಅನೇಕ ಬಾರಿ ಮುನ್ನೆಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ. ಆದರೆ ಶರಪಂಜರದಲ್ಲಿರಲು ಇಷ್ಟಪಡದ ರವಿಶಂಕರ್ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಭಕ್ತರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು.

ಆಶ್ರಮದಲ್ಲಿ ನೆಲೆಸಿರುವ ಪಾಸಿಟಿವ್ ಎನರ್ಜಿ ಯಿಂದಾಗಿ ಯಾವುದೇ ಅನಾಹುತ ಸಂಭಿಸಲಿಲ್ಲ. ಇದು ಶಾಂತಿ ಕುಟೀರ ಎಂದು ಘಟನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಭಕ್ತ ರಾಮಶೇಶನ್ ದಟ್ಸ್ ಕನ್ನಡಕ್ಕೆ ತಿಳಿಸಿದರು. ಸುದರ್ಶನ ಕ್ರಿಯೆಯ ಬಲ ಎಂಥ ಆಪತ್ತನ್ನೂ ಹಿಮ್ಮೆಟ್ಟಿಸುತ್ತದೆ ಎಂಬ ಅಚಲ ನಿಲವು ಅವರಿಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X