ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 10 ವರ್ಷ ಪೂರೈಸಿದ ಏರ್‌ಟೆಲ್‌

By Mahesh
|
Google Oneindia Kannada News

Bharti Airtel Karnataka Ceo Venkatesh with CM BSY
ಬೆಂಗಳೂರು, ಮೇ.30: ರಾಜ್ಯದಲ್ಲಿ ಅತಿ ದೊಡ್ಡ ನೆಟ್ ವರ್ಕ್ ಆಗಿರುವ ಏರ್‌ಟೆಲ್ , ಹತ್ತು ವರ್ಷಗಳ ಸೇವೆಯನ್ನು ಪೂರ್ತಿಗೊಳಿಸಿದೆ. ಇದೀಗ ರಾಜ್ಯದಲ್ಲಿ 3ಜಿ ಸೇವೆ ಆರಂಭಿಸಲು ಪರವಾನಗಿ ಪಡೆದಿರುವ ಏರ್‌ಟೆಲ್, ಕರ್ನಾಟಕದಲ್ಲಿ ಈಗಾಗಲೇ ಮೊಬೈಲ್ ಜಾಲ ವಿಸ್ತರಣೆಗೆ 5,300 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.

ಹತ್ತು ವರ್ಷಗಳನ್ನು ಪೂರೈಸಿದ ನಿಮಿತ್ತ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಏರ್‌ಟೆಲ್ ಸಿಇಒ(ಕರ್ನಾಟಕ)ವಿ.ವೆಂಕಟೇಶ್, ರಾಜ್ಯ ಸರ್ಕಾರ ನೀಡಿದ ಸಹಕಾರಕ್ಕೆ ಅಭಿನಂದಿಸಿದರಲ್ಲದೇ, ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇಫ್ಕೋ ನೆರವಿನೊಂದಿಗೆ ರೈತರಿಗೆ ನೀರಾವರಿ, ಕೃಷಿ ವಿಧಾನ ಕುರಿತು ಉಚಿತವಾಗಿ ಮಾಹಿತಿಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 1.3 ಕೋಟಿ ಮೊಬೈಲ್ ಫೋನ್ ಚಂದಾದಾರರನ್ನು ಹೊಂದಿರುವ ಏರ್‌ಟೆಲ್ ಟೆಲಿಕಾಂ ಕ್ಷೇತ್ರದಲ್ಲಿ ಶೇ.45 ರಷ್ಟು ಪಾಲು ಹೊಂದಿದೆ.

ರಾಯಚೂರಿನಲ್ಲಿ ನೆರ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲು ಈಗಾಗಲೇ ಒಂದು ಕೋಟಿ ರೂಪಾಯಿ ಭಾರ್ತಿ ಏರ್‌ಟೆಲ್ ನೀಡಿದೆ. 70 ಲಕ್ಷ ರುಪಾಯಿಗಳ ಎರಡನೇ ಕಂತಿನ ಚೆಕ್‌ನ್ನು ಮುಖ್ಯಮಂತ್ರಿಗಳಿಗೆ ವಿ. ವೆಂಕಟೇಶ್ ಹಸ್ತಾಂತರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X