ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಆರ್ಎಸ್ಎಸ್ ಕಾರ್ಯಕರ್ತ : ಯಡಿಯೂರಪ್ಪ

By Mrutyunjaya Kalmat
|
Google Oneindia Kannada News

Yeddyurappa
ಬಳ್ಳಾರಿ, ಮೇ. 28 : ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಚಾರ ವಿಚಾರಗಳ ಮೂಲಕ ಮುಖ್ಯಮಂತ್ರಿಯಾಗಿರುವ ವ್ಯಕ್ತಿ. ರೈತರ ಹಿತದೃಷ್ಠಿಯಿಂದ ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಆರ್ಎಸ್‌ಎಸ್ ಮುಖಂಡರು ಈ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅದರಲ್ಲಿ ತಪ್ಪೇನಿದೆ. ಇದಕ್ಕಾಗಿ ಪ್ರತಿಪಕ್ಷಗಳು ಈ ಸಮಾವೇಶವನ್ನು ಟೀಕಿಸುವುದು ತಪ್ಪು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಯಾವುದೇ ಜನಪರ ಸಂಘಟನೆ, ಪ್ರತಿಭಟನೆಗಳಲ್ಲಿ ಭಾಗವಹಿಸಲು ಸ್ವತಂತ್ರರು. ಅವರ ಪ್ರತಿಭಟನೆ, ಸಂಘಟನೆ, ಹೋರಾಟಕ್ಕೆ ನಾನು ಯಾವುದೇ ಕಾರಣಕ್ಕೂ ಅಡ್ಡಿ ಮಾಡುವುದಿಲ್ಲ ಎಂದರು.

ಆದರೆ ಇವರು ಮಾಡುತ್ತಿರುವ ಧರಣಿ, ಪ್ರತಿಭಟನೆಗಳು ಎಷ್ಟರಮಟ್ಟಿಗೆ ಸರಿಯಿವೆ ಎಂದು ಆತ್ಮಾಲೋಕನ ಮಾಡಿಕೊಳ್ಳುವ ಶಕ್ತಿಯನ್ನು ಭಗವಂತ ಅವರಿಗೆ ಕರುಣಿಸಲಿ. ನನ್ನ ಸರ್ಕಾರದ ಸಾಧನೆಯಿಂದಲೇ ಪ್ರತಿಪಕ್ಷಕ್ಕೆ ನಾನು ಉತ್ತರ ನೀಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಜನಪರ, ದೀನ ದಲಿತರ ಪರವಾದ ಸಾಕಷ್ಟು ಯೋಜನೆಗಳು ಯಶಸ್ವಿಯಾಗಿ ಜಾರಿ ಆಗುತ್ತಿವೆ. ಸರ್ಕಾರಕ್ಕೆ ಗ್ರಾಮೀಣ ಜನರ ಆಶೀರ್ವಾದ ಸಿಕ್ಕಿದೆ. ಇದನ್ನು ಸಹಿಸದ ಪ್ರತಿಪಕ್ಷಗಳು ನಮ್ಮನ್ನು ಟೀಕಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ಚತಪಡಿಸಿದರು.

ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳ್ವೆ - ಸುಗಮ ಜೀವನಕ್ಕೆ ದಾರಿ ಎನ್ನುವ ವಿಚಾರಗಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸರ್ಕಾರ ಜನಪರ ಆಗಿದೆ ಎಂದರು.

ರಾಜ್ಯದ ಯಾವುದೇ ಕೂಲಿಕಾರ್ಮಿಕರ ಮಕ್ಕಳು ಡಾಕ್ಟರ್, ಇಂಜಿನಿಯರ್ ಶಿಕ್ಷಣ ಪಡೆದು ಸ್ವಂತ ಬಲದಿಂದ ಮುಂದೆ ಬರಲು ಭಾಗ್ಯಲಕ್ಷ್ಮೀ ಯೋಜನೆ ಸುಮಾರು 9 ಲಕ್ಷ ಬಡ ಹೆಣ್ಣು ಮಕ್ಕಳಿಗೆ ನೀಡಿದ್ದು ಅತ್ಯಂತ ತೃಪ್ತಿದಾಯಕ ಎಂಬ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X