ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಲೇಖಾ ಕೊಲೆ : ಭಾರತಿ ಅರಸು ನಿರ್ದೋಷಿ

By Mrutyunjaya Kalmat
|
Google Oneindia Kannada News

Crimebeat
ಬೆಂಗಳೂರು, ಮೇ. 28 : ದೇಶದ ಗಮನ ಸೆಳೆದಿದ್ದ ಚಿತ್ರಲೇಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರ ಮಗಳು ಹಾಗೂ ಜೆಡಿಎಸ್ ನ ಮಾಜಿ ಲೀಡರ್ ಭಾರತಿ ಅರಸು ಸೇರಿ ಮೂವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

1ನೇ ತ್ವರಿತ ನ್ಯಾಯಾಲಯದಲ್ಲಿ ಈ ಬಗ್ಗೆ ಬುಧವಾರ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ ನಾರಾಯಣ ಅವರು ಈ ತೀರ್ಪು ನೀಡಿದ್ದಾರೆ. ಮಾಜಿ ಸಿಎಂ ದೇವರಾಜ್ ಅರಸು ಮಗಳು ಭಾರತಿ ಅರಸು, ಎಲ್ ಎನ್ ಚಂದ್ರಕಾಂತ್ ಮತ್ತು ಟಿ ಮಧುಕರ್ ಅವರನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ.

ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ ಪಿ ಚಂದ್ರಕಾಂತರಾಜೇ ಅರಸು ಅವರ ಮಗಳು ಚಿತ್ರಲೇಖಾ ಅವರು 2004 ಜನವರಿ 9ರಂದು ಕಾಣಿಯಾಗಿದ್ದರು. ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಣಿಯಾಗ ಎರಡು ತಿಂಗಳ ನಂತರ ಚಿತ್ರಲೇಖಾ ದೇಹ ಶಿರಾಡಿಘಾಟ್ ಬಳಿ ಪತ್ತೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಭಾರತಿ ಅರಸು ಮತ್ತು ಇತರ ಇಬ್ಬರನ್ನು ಬಂಧಿಸಲಾಗಿತ್ತು. 6 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶರು, 150 ಪುಟಗಳ ತೀರ್ಪು ಪ್ರಕಟಿಸಿದ್ದಾರೆ. ಇದುವರೆಗೂ 68 ಸಾಕ್ಷಿಗಳ ವಿಚಾರಣೆ ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X